29 ವರ್ಷದ ವಿ ಬೂಪತಿ ಎಂಬ ವ್ಯಕ್ತಿ ತನ್ನ ಕನಸಿನ ಬೈಕನ್ನು ಖರೀದಿಸಲು ಮೂರು ವರ್ಷಗಳಿಂದ ಕೂಡಿಟ್ಟ 1 ರೂಪಾಯಿ ನಾಣ್ಯದೊಂದಿಗೆ 2.6 ಲಕ್ಷ ರೂಪಾಯಿಯನ್ನು ಶನಿವಾರ ವ್ಯಾನ್ನಲ್ಲಿ ತಂದು ಸೇಲಂನ ಶೋರೂಮ್ ಬಳಿ ಚಕ್ರದ ಕೈಬಂಡಿಗಳಲ್ಲಿ ಇಳಿಸಲಾಯಿತು. ಈ ವೇಳೆ ಹಣವನ್ನು ಎಣಿಕೆ ಮಾಡಲು ಶೋರೂಮ್ ಬರೋಬ್ಬರಿ 10 ಗಂಟೆಗಳನ್ನು ತೆಗೆದುಕೊಂಡಿತು.
ಈ ಮೂಲಕ ಬೂಪತಿ ಹಣ ನೀಡಿ ಬಜಾಜ್ ಡೊಮಿನಾರ್ 400 ಖರೀದಿಸಿದ್ದಾನೆ.
ಮೂರು ವರ್ಷಗಳಿಂದ ಒಂದು ರೂಪಾಯಿ ನಾಣ್ಯಗಳನ್ನು ಸಂಗ್ರಹಿಸುವ ಮೂಲಕ ತಮಿಳುನಾಡಿನ ಯುವಕನೊಬ್ಬ ತನ್ನ ಕನಸಿನ ಬೈಕನ್ನು ಖರೀದಿಸಿದ್ದಾನೆ.
ಬಜಾಜ್ ಡೊಮಿನಾರ್ 400 ಬೈಕ್ ಖರೀದಿಸಲು ಮೂರು ವರ್ಷಗಳಿಗೂ ಹೆಚ್ಚು ಕಾಲ ಒಂದು ರೂಪಾಯಿ ನಾಣ್ಯಗಳನ್ನು ಕಲೆಕ್ಟ್ ಮಾಡುವ ಮೂಲಕ 2.6 ಲಕ್ಷ ರೂ.ಗಳನ್ನು ಉಳಿಸಿದ್ದಾರೆ. ದೇವಸ್ಥಾನಗಳು, ಹೋಟೆಲ್ಗಳು ಮತ್ತು ಟೀ ಸ್ಟಾಲ್ಗಳಲ್ಲಿ ನೋಟುಗಳನ್ನು ಕೊಟ್ಟು ಒಂದು ರೂಪಾಯಿ ನಾಣ್ಯಗಳನ್ನು ಪಡೆಯುತ್ತಿದ್ದನು.
ಶೋರೂಂ ಮ್ಯಾನೇಜರ್ ಮಹಾವಿಕ್ರಾಂತ್ ಮಾತನಾಡಿ, ನನಗೆ ಹಣವನ್ನು ನಾಣ್ಯಗಳಲ್ಲಿ ಸ್ವೀಕರಿಸಲು ಮೊದಲು ಇಷ್ಟವಿರಲಿಲ್ಲ. ಆದರೆ, ಬೂಪತಿಯನ್ನು ನಿರಾಶೆಗೊಳಿಸಲು ಬಯಸದ ಕಾರಣ ನಾನು ಅದನ್ನು ಸ್ವೀಕರಿಸಿದೆ ಎಂದರು.
ಬ್ಯಾಂಕ್ಗಳು 1 ಲಕ್ಷ ಎಣಿಸಲು 140 ರೂಪಾಯಿಗಳನ್ನು ವಿಧಿಸುತ್ತವೆ (ಅದೂ 2,000 ಮುಖಬೆಲೆಯಲ್ಲಿ). ನಾವು ಅವರಿಗೆ 2.6 ಲಕ್ಷ ರೂಪಾಯಿಗಳನ್ನು ಒಂದು ರೂಪಾಯಿ ನಾಣ್ಯಗಳಲ್ಲಿ ನೀಡಿದಾಗ ಅವರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಮಹಾವಿಕ್ರಾಂತ್ಗೆ ಪ್ರಶ್ನೆ ಎದುರಾಯ್ತು. ಆದ್ರೂ, ಅತ್ಯಾಧುನಿಕ ಬೈಕ್ ಖರೀದಿಸುವ ಬೂಪತಿ ಅವರ ಕನಸನ್ನು ಪರಿಗಣಿಸಿ ನಾನು ಅಂತಿಮವಾಗಿ ಒಪ್ಪಿಕೊಂಡೆ ಎಂದು ಹೇಳಿದರು.
ಬೂಪತಿ ಸೇರಿದಂತೆ ಅವರ ನಾಲ್ವರು ಸ್ನೇಹಿತರು ಮತ್ತು ಶೋರೂಂನ ಐವರು ಸಿಬ್ಬಂದಿ ನಾಣ್ಯಗಳನ್ನು ಎಣಿಸಿದರು. ಕೊನೆಗೆ ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಬೈಕ್ ಬೂಪತಿ ಕೈ ಸೇರಿದೆ.
ಬೂಪತಿ ಖಾಸಗಿ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯೂಟ್ಯೂಬರ್ ಕೂಡ ಆಗಿರುವ ಇವರು ಕಳೆದ ನಾಲ್ಕು ವರ್ಷಗಳಿಂದ ಹಲವು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ಬೈಕ್ ಬೆಲೆ ಎಷ್ಟು ಎಂದು ವಿಚಾರಿಸಲಾಗಿ 2 ಲಕ್ಷ ರೂಪಾಯಿ ಎಂದು ಹೇಳಿದ್ದರು ಎಂದು ಬೂಪತಿ ಹೇಳಿದ್ದಾರೆ.
ಆ ಸಮಯದಲ್ಲಿ ನನ್ನ ಬಳಿ ಅಷ್ಟು ಹಣ ಇರಲಿಲ್ಲ ಎಂದು ಬೂಪತಿ ತಿಳಿಸಿದರು. ನಾನು ಯೂಟ್ಯೂಬ್ ಚಾನೆಲ್ನಿಂದ ಗಳಿಸಿದ ಆದಾಯದಿಂದ ಹಣವನ್ನು ಉಳಿಸಲು ನಿರ್ಧರಿಸಿದೆ. ಹೀಗಾಗಿ ನಾನು ಸಂಗ್ರಹಿಸಿದ ಹಣದಿಂದ ನನ್ನ ಕಸಿನ ಬಜಾಜ್ ಡೊಮಿನಾರ್ 400 ಬೈಕ್ ಕರೀದಿಸಿದ್ದೇನೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada