ಬೈಕ್ ಮೇಲೆ ಯುವಕರಿಗೆ ಎಲ್ಲಿಲ್ಲದ ಪ್ರೀತಿ. ತಂದೆ-ತಾಯಿಯನ್ನು ಪೀಡಿಸಿ ಅಥವಾ ತಮಗೆ ಕೊಟ್ಟಿದ್ದ ಪಾಕೆಟ್ ಮನಿಯಲ್ಲಿ ಉಳಿಸಿ ಜೊತೆಗೆ ಒಂದಷ್ಟು ಹಣ ಸೇರಿಸಿ ಬೈಕ್ ಕೊಂಡರೆ ಇನ್ನು ಕೆಲವರು ಸಾಲ ಮಾಡಿ ಬೈಕ್ ತೆಗೆದುಕೊಳ್ಳುತ್ತಾರೆ. ಆದರೆ ತಮಿಳುನಾಡಿನ ಒಬ್ಬ ಯುವಕ ಮಾತ್ರ ಸತತ ಮೂರು ವರ್ಷದಿಂದ ಒಂದು ರೂಪಾಯಿಯ ನಾಣ್ಯಗಳನ್ನು ಕೂಡಿಟ್ಟು ಇದೀಗ 2.6 ಲಕ್ಷ ರೂ. ಬಜಾಜ್ ಡೊಮಿನರ್ ಬೈಕ್ ಖರೀದಿಸಿದ್ದಾರೆ. ಅಂದಹಾಗೆ ಈ ಬೈಕ್ ನ ಬೆಲೆಯ 2.6 ಲಕ್ಷ ರೂ. ಗಳನ್ನು ಒಂದು ರೂಪಾಯಿಯ ಕಾಯಿನ್ ಗಳನ್ನು ನೀಡಿ ಖರೀದಿಸಿದ್ದಾನೆ.
ಈತ ನೀಡಿದ ಕಾಯಿನ್ ಗಳನ್ನು ಎಣಿಕೆ ಮಾಡಲು ಶೋರೂಂನವರು ಹತ್ತು ಗಂಟೆ ಕಾಲ ತೆಗೆದುಕೊಂಡರಂತೆ. ಈತ ಬೈಕ್ ಖರೀದಿಸಿದ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಮಾತ್ರವಲ್ಲದೆ ಶೋರೂಂನವರು ಕಾಯಿನ್ ಎಣಿಸುತ್ತಿರುವ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada