ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ APRIL 13 ರಂದು ಬಿಡುಗಡೆ ಆಗಿದೆ. ಬೇರೆ ಸಮಯದಲ್ಲಾಗಿದ್ದಿದ್ದರೆ ಈ ಸಿನಿಮಾಕ್ಕೆ ವಿಶೇಷ ಮಹತ್ವ ಇರುತ್ತಿರಲಿಲ್ಲ. ಆದರೆ ಕನ್ನಡದ ‘ಕೆಜಿಎಫ್ 2’ಗೆ ಎದುರಾಗಿ ಈ ಸಿನಿಮಾ ಬರುತ್ತಿರುವ ಕಾರಣ ಕರ್ನಾಟಕದಲ್ಲಿ ತುಸು ಹೆಚ್ಚಾಗಿ ಈ ಸಿನಿಮಾ ಗಮನ ಸೆಳೆಯುತ್ತಿದೆ.
‘ಬೀಸ್ಟ್’ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ವಿಜಯ್ ನಟಿಸಿದ್ದು, ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ್ದು, ಸಿನಿಮಾವು ಆಕ್ಷನ್ ಕಾಮಿಡಿ ಕತೆಯನ್ನು ಹೊಂದಿದೆ. ಮಾಜಿ ಸೈನಿಕನ ಪಾತ್ರದಲ್ಲಿ ನಟಿಸಿರುವ ವಿಜಯ್, ಭಯೊತ್ಪಾದಕರಿಂದ ಒತ್ತೆಯಾಗಿಸಿಕೊಳ್ಳಲಾಗಿರುವ ಮಾಲ್ ಅನ್ನು ಅದರಲ್ಲಿನ ಜನರನ್ನು ಹೇಗೆ ಕಾಪಾಡುತ್ತಾನೆ ಎಂಬುದು ಸಿನಿಮಾದ ಕತೆ.
- ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಲು, ಶೋಗಳು ‘ಬೀಸ್ಟ್’ ಸಿನಿಮಾಕ್ಕೆ ದೊರೆತಿದೆ. ಬೀಸ್ಟ್’ ಸಿನಿಮಾದ ಮೂಲ ತಮಿಳು ಆವೃತ್ತಿಗೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳು ಬೆಂಗಳೂರಿನಲ್ಲಿ ದೊರೆತಿವೆ. ತಮಿಳು ಭಾಷೆಯ ‘ಬೀಸ್ಟ್’ಗೆ ಬುಕ್ ಮೈ ಶೋ ಮಾಹಿತಿಯ ಪ್ರಕಾರ ಬರೋಬ್ಬರಿ 84 ಚಿತ್ರಮಂದಿರಗಳು ದೊರೆತಿವೆ (ಪಿವಿಆರ್, ಐನಾಕ್ಸ್ ಸೇರಿ). 84 ಚಿತ್ರಮಂದಿರಗಳು ಮೊದಲ ದಿನ 504 ಶೋಗಳನ್ನು ಪ್ರದರ್ಶನ ಮಾಡಲಿದೆ. ಇದು ಸಾಮಾನ್ಯ ಸಂಖ್ಯೆಯೇನಲ್ಲ.
- ಬೀಸ್ಟ್’ ಕನ್ನಡ ಆವೃತ್ತಿಗೆ ಬೆಂಗಳೂರಿನಲ್ಲಿ 13 ಶೋಗಳಷ್ಟೆ ಇನ್ನು ‘ಬೀಸ್ಟ್’ ಸಿನಿಮಾದ ಕನ್ನಡ ಆವೃತ್ತಿಯು ಬೆಂಗಳೂರಿನಲ್ಲಿ ಕೇವಲ 13 ಶೋಗಳಷ್ಟೆ ಪ್ರದರ್ಶನ ಕಾಣುತ್ತಿವೆ. ಹಾಗೂ ತೆಲುಗು ಆವೃತ್ತಿಯ ಶೋಗಳು ಪ್ರದರ್ಶನ ಕಾಣುತ್ತಿರುವುದು ಕೇವಲ 7 ಶೋಗಳಷ್ಟೆ. ‘ಬೀಸ್ಟ್’ ಸಿನಿಮಾದ ಮಲಯಾಳಂ ಹಾಗೂ ಹಿಂದಿ ಡಬ್ಬಿಂಗ್ ಆವೃತ್ತಿ ಬೆಂಗಳೂರಿನಲ್ಲಿ ಪ್ರದರ್ಶನವಾಗುತ್ತಿಲ್ಲ.
- ‘ಬೀಸ್ಟ್’ ಸಿನಿಮಾದ ವಿಮರ್ಶೆಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada