ಏಪ್ರಿಲ್ 24ಕ್ಕೆ ಹೊಸ ಸಿನಿಮಾ ಲಾಂಚ್!
ಪ್ರೇಮ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ. ಈ ಹಿಂದೆ ಭೂಗತ ಲೋಕದ ಕಥೆ ಹೇಳಿದ್ದರು. ಕರಿಯಾ, ಜೋಗಿ, ಜೋಗಯ್ಯದಲ್ಲಿ ಭೂಗತ ಲೋಕವನ್ನು ಅನಾವರಣ ಮಾಡಿದ್ದ ಪ್ರೇಮ್ ಮತ್ತೆ ಅಂಥಹದ್ದೇ ಸಿನಿಮಾ ಮಾಡುತ್ತಿದ್ದಾರೆ. ಏಕ್ ಲವ್ ಯಾ’ ಚಿತ್ರ ರಿಲೀಸ್ ಬೆನ್ನಲ್ಲೇ ಧ್ರುವ ಸರ್ಜಾಗೆ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎನ್ನುವ ಸುದ್ದಿ ಹೊರ ಬಂದಿತ್ತು. ಈಗ ಈ ಸುದ್ದಿ ಪಕ್ಕಾ ಆಗಿದೆ. ಪ್ರೇಮ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರೇಮ್ 70ರ ದಶಕದ ನಗರವನ್ನೇ ಸೃಷ್ಟಿ ಮಾಡುತ್ತಿದ್ದಾರಂತೆ. ಈ ಹಿಂದೆ ಭೂಗತ ಲೋಕದ ಕಥೆ ಹೇಳಿದ್ದರು. ಕರಿಯಾ, ಜೋಗಿ, ಜೋಗಯ್ಯದಲ್ಲಿ ಭೂಗತ ಲೋಕವನ್ನು ಅನಾವರಣ ಮಾಡಿದ್ದ ಪ್ರೇಮ್ ಮತ್ತೆ ಅಂಥಹದ್ದೇ ಸಿನಿಮಾ ಮಾಡುತ್ತಿದ್ದಾರೆ.
ಏಪ್ರಿಲ್ 24ರಂದು ಧ್ರುವ ಮತ್ತು ಪ್ರೇಮ್ ಹೊಸ ಚಿತ್ರ ಲಾಂಚ್ ಆಗಲಿದೆ. ಈ ಬಗ್ಗೆ ನಿರ್ದೇಶಕ ಪ್ರೇಮ್ ಟ್ವೀಟ್ ಮಾಡಿ ವಿಚಾರ ಹಂಚಿಕೊಂಡಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಆಹ್ವಾನ ಕೊಟ್ಟಿದ್ದಾರೆ. “ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ, 24ರಂದು ಬೆಳಿಗ್ಗೆ 9:30ಕ್ಕೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನಡೆಯೋ ಮುಹೂರ್ತಕ್ಕೆ ನೀವೇ ಮುಖ್ಯ ಅತಿಥಿ, ಬನ್ನಿ ಒಟ್ಟಿಗೆ ಹಬ್ಬ ಮಾಡೋಣ, ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ, ಹರಸಿ ಹಾರೈಸಿ. ಸ್ಥಳ: ಮೈಸೂರು ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸನ್ನಿಧಿ.” ಎಂದು ಪ್ರೇಮ್ ಟ್ವಿಟ್ ಮಾಡಿದ್ದಾರೆ.