ಬೆಂಗಳೂರು: ಕನ್ನಡ ಚಿತ್ರರಂಗದ ಸಾರ್ವಕಾಲಿಕ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್’ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಾಗಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವ ಮೂಲಕ 88 ವರ್ಷದ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಬರೆದಿದೆ.
ಪುನೀತ್ ರಾಜ್ ಕುಮಾರ್ ಅವರ ಹುಟ್ಟಹಬ್ಬವಾದ ಮಾರ್ಚ್ 17 ರಂದು ವಿಶ್ವದಾದ್ಯಂತ ನಾಲ್ಕು ಸಾವಿರ ಪರದೆಗಳಲ್ಲಿ ತೆರೆ ಕಂಡಿದ್ದ ‘ಜೇಮ್ಸ್’ ಚಿತ್ರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಈ ಚಿತ್ರ ಭಾವನಾತ್ಮಕವಾಗಿ ಪುನೀತ್ ಅಭಿಮಾನಿಗಳನ್ನು ಹೆಚ್ಚು ಸೆಳೆದಿದ್ದು, ಕೊನೆಯ ಬಾರಿಗೆ ತೆರೆಯ ಮೇಲೆ ತನ್ನ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ
Next Post
ವಿಜಯಪುರದಲ್ಲಿ ಮತ್ತೆ ಭೂಕಂಪದ ಭೀತಿ; ಆತಂಕಗೊಂಡ ಜನ
Tue Mar 22 , 2022
ವಿಜಯಪುರ: ನಗರ ಸೇರಿದಂತೆ ಇತರೆ ಭಾಗದಲ್ಲಿ ಮಂಗಳವಾರ ಬೆಳಗ್ಗೆ 11.22 ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸಾರ್ವಜನಿಕರಲ್ಲಿ ಮತ್ತೆ ಆತಂಕ ಮೂಡುವಂತಾಗಿದೆ.ಇಲ್ಲಿನ ಕನಕದಾಸ ಬಡಾವಣೆ, ಶಿಕಾರಖಾನೆ, ಗೋಳಗುಮ್ಮಟ, ಎಪಿಎಂಸಿ, ರೇಲ್ವೆಸ್ಟೇಷನ್ ಪ್ರದೇಶ, ರಂಭಾಪೂರ, ಕವಲಗಿ ಸೇರಿದಂತೆ ಹಲವೆಡೆ ಲಘು ಭೂಕಂಪನ ಆಗಿದ್ದು, ಜನರು ಭೀತಿಗೊಳ್ಳುವಂತಾಗಿದೆ. ಹಲವು ದಿನಗಳ ಬಳಿಕ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಭೀತಿ ಮರುಕಳಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಪರಿಶೀಲಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

You May Like
-
10 months ago
`ಓಲ್ಡ್ ಮಾಂಕ್’ಶೀಘ್ರದಲ್ಲೇ ಟಿವಿಯಲ್ಲಿ..
-
10 months ago
70ರ ದಶಕದ ಸಿನಿಮಾ ಸೃಷ್ಟಿಸಲಿರುವ ಪ್ರೇಮ್..!
-
10 months ago
“ಗಿರ್ಕಿ” ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರ ಸೆಂಚುರಿ ಸ್ಟಾರ್..
-
11 months ago
ನಟ ಸಲ್ಮಾನ್ ಖಾನ್ ಗೆ ಕೋರ್ಟ್ ಸಮನ್ಸ್
-
11 months ago
ಉಪ್ಪಿ ಕಂಠಸಿರಿಯಲ್ಲಿ “ಹುಷಾರ್” ಹಾಡು.