ಹಲಾಲ್ ಸಹಿತ ಅನ್ಯ ಧರ್ಮಗಳಲ್ಲಿ ಹಲವು ಪದ್ಧತಿಗಳು ಜಾತಿಯಲ್ಲಿವೆ. ಧರ್ಮದ ಆಚರಣೆ, ನಂಬಿಕೆ ಹಾಗೂ ಪಾವಿತ್ರ್ಯತೆಯನ್ನು ನಾವು ಗೌರವಿಸುತ್ತೇವೆ. ಅನ್ಯ ಧರ್ಮಗಳಲ್ಲಿನ ಆಹಾರ ಪದ್ದತಿಯಲ್ಲಿ ಗೋ ಮಾಂಸ ಸೇವಿಸುತ್ತಾರೆ.
ಹಿಂದೂಗಳಾದ ನಾವು ಗೋವನ್ನು ತಾಯಿ ಎಂದು ಪೂಜಿಸುತ್ತೇವೆ. ಜಾತ್ರೆಯ ಸಮಯದಲ್ಲಿ ಅಲ್ಲಿ ಅಂಗಡಿ ಹಾಕುವ ಅನ್ಯಧರ್ಮೀಯರು ಗೋ ಮಾಂಸ ಸೇವಿಸಿ ಬರುವ ಸಾಧ್ಯತೆ ಇರುತ್ತದೆ. ಇದರಿಂದ ಆ ಕ್ಷೇತ್ರದ ಪಾವಿತ್ರ್ಯತೆಗೆ ಭಂಗ ಬರುತ್ತದೆ.
ಈ ಹಿನ್ನೆಲೆಯಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡಲು 2002ರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮದಲ್ಲಿ ಉಲ್ಲೇಖಿಸಿರುವ ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದ್ದಲ್ಲ ಎಂಬುದನ್ನು ಯಥಾವತ್ತಾಗಿ ಜಾರಿಗೆ ತರಬೇಕು.
ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪತ್ರದಲ್ಲಿ ಸಿಎಂ ಮತ್ತು ಮುಜರಾಯಿ ಸಚಿವರಿಗೆ ಶಾಸಕ ಬೋಪಯ್ಯ ಒತ್ತಾಯಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada