ಉಕ್ರೇನ್ನ ಬೊರೊಡ್ಯಂಕಾದ 9 ವರ್ಷದ ಬಾಲಕಿಯೊಬ್ಬಳು ಬರೆದ ಹೃದಯನ್ನು ಹಿಂಡುವ ಪತ್ರವು ನೆಟ್ಟಿಗರ ಕಣ್ಣಿನಲ್ಲಿ ಕಣ್ಣೀರು ಸುರಿಸುವಂತೆ ಮಾಡಿದೆ ಎಂದು ಹೇಳಬಹುದು. ಉಕ್ರೇನ್ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಗೆರಾಶ್ಚೆಂಕೊ ಅವರು ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಕೈಬರಹದ ಪತ್ರವನ್ನು ತೋರಿಸುತ್ತದೆ.
ಕಳೆದ ಒಂದೂವರೆ ತಿಂಗಳಿನಿಂದ ರಷ್ಯಾದ ಕ್ರೂರ ಆಕ್ರಮಣವು ಉಕ್ರೇನ್ನ ಹಲವಾರು ನಗರಗಳನ್ನು ಧ್ವಂಸಗೊಳಿಸಿದಲ್ಲದೆ, ಅನೇಕ ಜನರನ್ನು ತಮ್ಮ ರಕ್ತ ಸಂಬಂಧದವರಿಂದ ದೂರ ಮಾಡಿದೆ ಎಂದು ಹೇಳಬಹುದು. ಸುದ್ದಿ ವಾಹಿನಿಗಳಲ್ಲಿ ತೋರಿಸುತ್ತಿರುವ ಆ ಭಯಾನಕ ದೃಶ್ಯಗಳು ಮತ್ತು ಫೋಟೋಗಳು ಉಕ್ರೇನ್ನಲ್ಲಿರುವ ಕೆಟ್ಟ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅನೇಕ ಜನರು ತಮ್ಮ ಮನೆಗಳನ್ನು, ಉದ್ಯೋಗಗಳನ್ನು ಮತ್ತು ತಮ್ಮ ಪ್ರೀತಿ ಪಾತ್ರರನ್ನು ಬಿಟ್ಟು ಬೇರೆಡೆ ಆಶ್ರಯ ಪಡೆಯಲು ಒತ್ತಾಯಿಸಲ್ಪಟ್ಟರು. ಅನೇಕ ಮಕ್ಕಳು ತಮ್ಮ ತಂದೆ ತಾಯಂದಿರನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಮತ್ತು ಜನರ ಮೇಲೆ ಆದ ದೌರ್ಜನ್ಯಗಳ ಪಟ್ಟಿಯು ವಿವರಿಸಲು ತುಂಬಾ ಉದ್ದವಾಗಿದೆ.
ಇಂತಹ ಭಯಾನಕ ಕಥೆಗಳ ನಡುವೆ, ಉಕ್ರೇನ್ನ ಬೊರೊಡ್ಯಂಕಾದ 9 ವರ್ಷದ ಬಾಲಕಿಯೊಬ್ಬಳು ಬರೆದ ಹೃದಯನ್ನು ಹಿಂಡುವ ಪತ್ರವು ನೆಟ್ಟಿಗರ ಕಣ್ಣಿನಲ್ಲಿ ಕಣ್ಣೀರು ಸುರಿಸುವಂತೆ ಮಾಡಿದೆ ಎಂದು ಹೇಳಬಹುದು. ಉಕ್ರೇನ್ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಗೆರಾಶ್ಚೆಂಕೊ ಅವರು ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಕೈಬರಹದ ಪತ್ರವನ್ನು ತೋರಿಸುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada