ಬರೋಬ್ಬರಿ ₹ 6.75 ಲಕ್ಷಕ್ಕೆ ಹರಾಜಾದ ಎಆರ್​ ರೆಹಮಾನ್ ಧಿರಿಸು

ಭಾರತೀಯ ಚಿತ್ರ ಸಂಗೀತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದವರು.2009ರಲ್ಲಿ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರಕ್ಕೆ ಎರಡೆರಡು ಆಸ್ಕರ್ ಪ್ರಶಸ್ತಿ ಪಡೆದ ಪ್ರತಿಭಾವಂತ ಸಂಗೀತ ಸಂಯೋಜಕ ಅವರು. ಭಾರತೀಯ ಜಾನಪದ ಸಂಗೀತ, ವಿವಿಧ ಬಗೆಯ ವಾದ್ಯಗಳನ್ನು ಪಾಶ್ಚಾತ್ಯ ಸಂಗೀತದೊಂದಿಗೆ ಅವರು ಮಿಳಿತಗೊಳಿಸುವ ಪರಿ ಎಂಥವರಿಗೂ ಬೆರಗು ಹುಟ್ಟಿಸುತ್ತದೆ. ಹಿಂದಿ, ಇಂಗ್ಲೀಷ್ ಹಾಗೂ ತಮಿಳು ಚಿತ್ರರಂಗದಲ್ಲಿ ಮುಖ್ಯವಾಗಿ ಸಕ್ರಿಯರಾಗಿರುವ ಅವರು, ದೇಶ- ವಿದೇಶದಲ್ಲಿ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. 1992ರಲ್ಲಿ ‘ರೋಜಾ’ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಅವರು ಪದಾರ್ಪಣೆ ಮಾಡಿದ ಅವರು ಪ್ರಸ್ತುತ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಸಂಗೀತ ಸಂಯೋಜಕರಲ್ಲಿ ಒಬ್ಬರು. ಅವರ ಮೇಲೆ ಜನರಿಗೆ ಎಷ್ಟು ಅಭಿಮಾನವಿದೆ ಎನ್ನುವುದಕ್ಕೆ ಇತ್ತೀಚಿನ ಘಟನೆಯೊಂದು ಸಾಕ್ಷಿಯಾಗಿದೆ. ಹೌದು. ಎ.ಆರ್.ರೆಹಮಾನ್ ಧರಿಸಿದ್ದ ದಿರಿಸೊಂದು ಹರಾಜಿನಲ್ಲಿ ಬರೋಬ್ಬರಿ ₹ 6.75 ಲಕ್ಷಕ್ಕೆ ಮಾರಾಟವಾಗಿದೆ.

ಎ.ಆರ್.ರೆಹಮಾನ್ ಧಿರಿಸು ಹರಾಜಾಗಿದ್ದು ಯಾವ ಉದ್ದೇಶಕ್ಕೆ?

‘ರಾಜಸ್ಥಾನ ಕಾಸ್ಮೋ ಕ್ಲಬ್ ಫೌಂಡೇಶನ್‌’ನ 28 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಇತ್ತೀಚೆಗೆ ಆಳ್ವಾರ್‌ಪೇಟೆ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳುನಾಡು ಕೈಮಗ್ಗ ಸಚಿವ ಆರ್.ಗಾಂಧಿ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡುವುದಾಗಿ ಘೋಷಿಸಿದ್ದರು. ಕಾರ್ಯಕ್ರಮದ ಅಂಗವಾಗಿ, ಬಟ್ಟೆಯನ್ನು ಖರೀದಿಸಲು ಅಶಕ್ತರಾದವರಿಗೆ ಸಹಾಯ ಮಾಡುವ ಯೋಜನೆಯಡಿ ಎ.ಆರ್.ರೆಹಮಾನ್ ಧರಿಸಿದ್ದ ದಿರಿಸನ್ನು ಹರಾಜು ಹಾಕಲಾಯಿತು.

Leave a Reply

Your email address will not be published. Required fields are marked *

Next Post

ಸುತ್ತಾಡಲು ಆಟೋ ಕದಿಯುತ್ತಿದ್ದವನ ಸೆರೆ

Wed Mar 23 , 2022
ಶೋಕಿಗಾಗಿ ಮನೆ ಮುಂದೆ ನಿಲ್ಲಿಸಿದ್ದ ಆಟೋಗಳನ್ನ ಕಳ್ಳತನ ಮಾಡುತ್ತಿದ್ದ ಕಾನೂನು ಆಪರಾಧಕ್ಕೆ ಒಳಗಾದವನ್ನನ್ನು ಕೆಂಗೇರಿ ಪೋಲೀಸ್ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಜೆ.ಪಿ. ನಗರ ನಿವಾಸಿ ಆದ ಈತ 15 ಲಕ್ಷ ರೂ. ಮೌಲ್ಯದ 6 ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗೆ ಆಟೋ ಚಲಾಯಿಸುವುದು ಅಭ್ಯಾಸ ಮಡಿಕೊಂಡಿದ್ದ ಹೀಗಾಗಿ ಮನೆ ಮುಂದೆ ನಿಲ್ಲಿಸಿದ್ದ ಆಟೋಗಳನ್ನು ಕಳವು ಮಾಡುತ್ತಿದ್ದ. ಬಳಿಕ ನಗರದೆಲ್ಲೆಡೆ ಓಡಾಟ ನಡೆಸಿ, ಇಂಧನ ಅಥವಾ ಗ್ಯಾಸ್‌ ಖಾಲಿಯಾಗುತ್ತಿದ್ದಂತೆ ಎಲ್ಲೆಂದರಲ್ಲಿ ನಿಲ್ಲಿಸಿ ಪರಾರಿಯಾಗುತ್ತಿದ್ದ.ಇತ್ತೀಚೆಗೆ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: