ಬಾಲಿವುಡ್ ನ ನಟ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ? ಈ ಸುದ್ದಿ ಕೇಳಿ ಆಮೀರ್ ಖಾನ್ ಅಭಿಮಾನಿಗಳು ಶಾಕ್ ಒಳಗಾಗಿದ್ದಾರೆ. ನೀವು ಇನ್ನೂ ಸಿನಿಮಾಗಳನ್ನು ಮಾಡಬೇಕು, ನಿಮ್ಮ ನಟನೆಯನ್ನು ಇನ್ನಷ್ಟು ನೋಡಬೇಕು, ಚಿತ್ರರಂಗದಲ್ಲಿ ಇನ್ನೂ ಬಹಳ ವರ್ಷ ನೀವು ಇರಬೇಕು ಅಂತ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಹಾಗಿದ್ರೆ ಆಮೀರ್ ಖಾನ್ ನಿಜಕ್ಕೂ ಚಿತ್ರರಂಗ ತೊರೆಯುವುದಕ್ಕೆ ನಿರ್ಧಾರ ಮಾಡಿದ್ದಾರಾ? ಅವರಿಗೆ ಅಂಥದ್ದು ಏನಾಯ್ತು? ಆಮೀರ್ ಖಾನ್ ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ. ಕೆಲವೇ ತಿಂಗಳ ಹಿಂದಷ್ಟೇ ಈ ಸಿನಿಮಾ ಸಹವಾಸ ಸಾಕು, ಇದರಿಂದ ಬ್ರೇಕ್ ತೆಗೆದುಕೊಳ್ಳ ಬೇಕು ಅಂತ ಆಮೀರ್ ಖಾನ್ ನಿರ್ಧಾರ ಮಾಡಿದ್ದರಂತೆ. 57 ವರ್ಷದ ಅಮೀರ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಚಿತ್ರರಂಗಕ್ಕೆ ವಿದಾಯ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ವೈಯುಕ್ತಿಕ ಜೀವನ ಮತ್ತಿತರ ಕಾರಣಗಳಿಂದ ಅವರ ಮನಸ್ಸಿನಲ್ಲಿ ಇಂತಹ ಯೋಚನೆಗಳು ಬಂದಿದ್ದವು ಅಂತ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಮೀರ್ ಖಾನ್ ಹೆಂಡತಿ ಕಿರಣ್ ರಾವ್ ಅವರೊಂದಿಗಿನ ಬಾಂಧವ್ಯವನ್ನು ಮುರಿಯುವ ಬಗ್ಗೆ ಬಾಲಿವುಡ್ನಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಸಿನಿಮಾಗಳಿಂದ ನನ್ನ ಕುಟುಂಬ ಮತ್ತು ಮಕ್ಕಳಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ನಾನು ಭಾವಿಸಿದ್ದೇನೆ, ಇದೇ ಕಾರಣಕ್ಕೆ ನಟನೆ ಬಿಡುವ ಮನಸ್ಸು ಅವರ ಮನದಲ್ಲಿ ಮೂಡಿತ್ತಂತೆ. ಈ ಎಲ್ಲ ವಿಚಾರಗಳನ್ನು ಆಲೋಚನೆ ಮಾಡಿದ ಬಳಿಕ ಆಮಿರ್ ಖಾನ್ ಅವರು ಚಿತ್ರರಂಗಕ್ಕೆ ಗುಡ್ಬೈ ಹೇಳಲು ನಿರ್ಧರಿಸಿದ್ದರು. ಅದನ್ನು ಕುಟುಂಬದವರ ಜೊತೆ ಹೇಳಿಕೊಂಡಿದ್ದರು. ಆದರೆ ಮನೆಯವರು ಅದಕ್ಕೆ ಒಪ್ಪಿಗೆ ನೀಡಿಲ್ಲ. ಫ್ಯಾಮಿಲಿ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವಂತೆ ಹೆಂಡತಿ ಹಾಗೂ ಮಕ್ಕಳು ಸಲಹೆ ನೀಡಿ್ದರಂತೆ. ಹೀಗಾಗಿ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿದೆ ಅಂತ ಆಮೀರ್ ಖಾನ್ ಹೇಳಿದ್ದಾರೆ. ನನಗೆ ಈಗ ಬೇಗ ಅರ್ಥವಾಯಿತು. ಹೀಗಾಗಿ ಸಿನಿಮಾ ಜೊತೆಗೆ ಫ್ಯಾಮಿಲಿಗೂ ಸಮಯ ಕೊಡಲು ನಿರ್ಧಾರ ಮಾಡಿದ್ದೇನೆ ಅಂತ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada