ಮಾರ್ಚ್ 25ರಿಂದ ಜೀ5ನಲ್ಲಿ ಅಜಿತ್ ವಲಿಮೈ ಧಮಾಕಾ!

ಥಲಾ ಅಜಿತ್ ನಟನೆಯ ಬ್ಲಾಕ್ ಬಸ್ಟರ್ ಆಕ್ಷನ್ ಥ್ರಿಲ್ಲರ್ ವಲಿಮೈ ಸಿನಿಮಾ ಜೀ5 ಒಟಿಟಿಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದೆ. ಇದೇ ಶುಭ ಶುಕ್ರವಾರದಂದು ಪ್ರತಿಷ್ಠಿತ ಜೀ5 ಒಟಿಟಿಯಲ್ಲಿ ವಲಿಮೈ ರಿಲೀಸ್ ಆಗ್ತಿದೆ. ಕಳೆದ ಫೆಬ್ರವರಿ 25ರಂದು ಪಂಚ ಭಾಷೆಯಲ್ಲಿ ತೆರೆಗಪ್ಪಳಿಸಿದ್ದ ವಲಿಮೈ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ಕೋಟಿ ಕೋಟಿ ಹಣ ಬಾಚಿತ್ತು. ಅಜಿತ್ ಆಕ್ಷನ್ ಬೈಕ್ ಸ್ಟಂಟ್ ಕಂಡು ಫ್ಯಾನ್ಸ್ ಥ್ರಿಲ್ಲ್ ಆಗಿದ್ದರು. ಇದೀಗ ಜೀ 5 ಒಟಿಟಿಯಲ್ಲಿ ಮಾರ್ಚ್ 25ರಿಂದ ವಲಿಮೈ ಪ್ರೀಮಿಯರ್ ಆಗ್ತಿದೆ.ಹತ್ತು ಸಾವಿರ ಚದರ ಅಡಿಯಲ್ಲಿ ವಲಿಮೈ ಪೋಸ್ಟರ್.
ಜೀ5 ಒಟಿಟಿಯಲ್ಲಿ ವಲಿಮೈ ಪ್ರದರ್ಶನ ಕಾಣ್ತಿರುವ ಹಿನ್ನೆಲೆ ಚಿತ್ರತಂಡ ಅದ್ಧೂರಿಯಾಗಿ ಪ್ರಮೋಷನ್ ಮಾಡ್ತಿದೆ. ನಾ ಭೂತೋ ನಾ ಭವಿಷ್ಯತ್ ಎನ್ನುವ ಹಾಗೇ ಹಿಂದೆ ಯಾರು ಮಾಡದ ರೀತಿ ಪ್ರಮೋಷನ್ ಮಾಡಿದೆ. ಬರೋಬ್ಬರಿ ಹತ್ತು ಸಾವಿರ ಚದರ ಅಡಿಯಲ್ಲಿ ವಲಿಮೈ ಸಿನಿಮಾದ ಪೋಸ್ಟರ್ ವೊಂದನ್ನು ಜೀ 5ಬಿಡುಗಡೆ ಮಾಡಿ ಚಿತ್ರರಸಿರಕನ್ನು ಅಟ್ರ್ಯಾಕ್ಟ್ ಮಾಡ್ತಿದೆ. ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ ಈವರೆಗೆ ಇಷ್ಟು ದೊಡ್ಡ ಮಟ್ಟದ ಪೋಸ್ಟರ್ ನ್ನು ಯಾರು ಬಿಡುಗಡೆ ಮಾಡಿಲ್ಲ. ಆದ್ರೆ ಜೀ5 ಇಂತಹ ವಿಶೇಷ ಪ್ರಯತ್ನ ಮಾಡಿ ಸೈ ಎನಿಸಿಕೊಂಡಿದೆ.ಕನ್ನಡದಲ್ಲೂ ವಲಿಮೈ ಕಮಾಲ್!

ಅಜಿತ್ ನಟನೆಯ ವಲಿಮೈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ.. ತಮಿಳು, ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳ ಭಾಷೆಯಲ್ಲಿಅದ್ಧೂರಿಯಾಗಿರಿಲೀಸ್ ಆಗಿತ್ತು. ಈಗ ಜೀ 5ಒಟಿಟಿಯಲ್ಲಿ ಐದು ಭಾಷೆಯಲ್ಲಿ ಮಾರ್ಚ್ 25ರಿಂದ ಪ್ರೀಮಿಯರ್ ಆಗಲಿದ ವಲಿಮೈ’ ಚಿತ್ರದಲ್ಲಿ ಅಜಿತ್ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದು, ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಬೋನಿ ಕಪೂರ್ ಬಂಡವಾಳ ಹೂಡಿದ್ದು, ಸುಮಾರು 150 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಅಜಿತ್‌ ಜೊತೆಗೆ ಹುಮಾ ಖುರೇಷಿ, ಕಾರ್ತಿಕೇಯ ಗುಮ್ಮಕೊಂಡ, ಕನ್ನಡದ ನಟ ಅಚ್ಯುತ್ ಕುಮಾರ್ ಮುಂತಾದವರು ಬಣ್ಣ ಹಚ್ಚಿದ್ದಾರೆ.

Leave a Reply

Your email address will not be published. Required fields are marked *

Next Post

ಕಬ್ಜ'ಗೆ ಟಾಲಿವುಡ್ನ‌‌ ಮುರಳಿ ಶರ್ಮಾ

Tue Mar 22 , 2022
ನಿರ್ದೇಶಕ ಆರ್.ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಮೊನ್ನೆಯಷ್ಟೇ ಶ್ರಿಯಾ ಶರಣ್ ಸೇರ್ಪಡೆಯಾದ್ರು, ಇದೀಗ ತೆಲುಗಿನ ಖ್ಯಾತ ನಟರಾರ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ ಅವರು ‘ಕಬ್ಜ’ ಚಿತ್ರಕ್ಕೆ ಜೊತೆಯಾಗಿದ್ದಾರೆ. ಈ ವಿಚಾರವನ್ನ ಚಿತ್ರತಂಡ ಹಂಚಿಕೊಂಡಿದ್ದು, ಉಪ್ಪಿ ಕಿಚ್ಚ ಕಾಂಬಿನೇಷನ್ನ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯ ಕಲಾವಿದ್ರೂ ಇರಲಿದ್ದಾರೆ ಅಂತ ಹೇಳಲಾಗ್ತಿದೆ.

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: