ಪುಣೆಯ ಕಟ್ರಾಜ್ನ ಅಕ್ರಮ ಎಲ್ಪಿಜಿ ರೀಫಿಲ್ಲಿಂಗ್ ಘಟಕವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅದರಲ್ಲಿದ್ದ 20 ಸಿಲಿಂಡರ್ಗಳು ಸ್ಫೋಟಗೊಂಡಿರುವ ಘಟನೆ ನಡೆದಿದೆ. ಇಲ್ಲಿ ಗ್ಯಾಸ್ನ್ನು ದೊಡ್ಡದರಿಂದ ಸಣ್ಣ ಸಿಲಿಂಡರ್ಗಳಿಗೆ ಅಕ್ರಮವಾಗಿ ಮರುಪೂರಣ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೇ ಅಕ್ರಮವಾಗಿ ಮರುಪೂರಣ ಮಾಡುತ್ತಿದ್ದ ವ್ಯಕ್ತಿ ಸೇರಿದಂತೆ ಇಬ್ಬರನ್ನು ಬಂಧಿಸಿ, ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಟ್ರಾಜ್ನ ಅಂಜನಿ ನಗರ ಪ್ರದೇಶದಲ್ಲಿನ ಸಣ್ಣ ಟಿನ್ ಶೆಡ್ನಿಂದ ನಡೆಸಲಾಗುತ್ತಿರುವ ಅಕ್ರಮ ಮರುಪೂರಣ ಘಟಕದಲ್ಲಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯ ಅಗ್ನಿಶಾಮಕ ಅಧಿಕಾರಿ ಸುನಿಲ್ ಗಿಲ್ಬೈಲ್ ಮಾತನಾಡಿ, ‘ಇದು 15 ಅಡಿ 20 ಅಡಿ ಟಿನ್ ಶೆಡ್ನಲ್ಲಿ ಇರಿಸಲಾದ ಒಂದು ಸಣ್ಣ ಘಟಕವಾಗಿದೆ. ಇದರಲ್ಲಿ ಕನಿಷ್ಠ 110 ಸಣ್ಣ ಮತ್ತು ದೊಡ್ಡ ಸಿಲಿಂಡರ್ಗಳನ್ನು ಸಂಗ್ರಹಿಸಿಡಲಾಗಿದೆ. ಬೆಂಕಿಯ ಸಂದರ್ಭದಲ್ಲಿ ಇಲ್ಲಿದ್ದ ಕನಿಷ್ಠ 20 ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡಿವೆ. ನಾವು 10 ಅಗ್ನಿಶಾಮಕ ಟೆಂಡರ್ಗಳನ್ನು ನಿಯೋಜಿಸಿದ್ದೇವೆ. 20 ನಿಮಿಷಗಳಲ್ಲಿ ಬೆಂಕಿಯನ್ನು ನಿಯಂತ್ರಿಸಲಾಯಿತು ಎಂದರು.