ಅಮೇರಿಕಾದಲ್ಲಿ ಸ್ನೇಹ ಹಿಂದೆ ಸುತ್ತುತ್ತಿದ್ದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಭಾರತದ ಪ್ರಮುಖ ನಟರಲ್ಲಿ ಒಬ್ಬರು. ಪುಷ್ಪಾ ಸಿನಿಮಾದ ನಂತರ, ಅವರ ಜನಪ್ರಿಯತೆ ಪ್ರಪಂಚದಾದ್ಯಂತ ಅಪಾರವಾಗಿ ಹೆಚ್ಚಿದೆ. ಅಲ್ಲು ಅರ್ಜುನ್ ತಮ್ಮ ನಟನೆಯ ಮೂಲಕ ಮಾತ್ರವಲ್ಲದೆ ತಮ್ಮ ನೃತ್ಯ ಮತ್ತು ಡ್ಯಾಶಿಂಗ್ ಸ್ಟೈಲ್ ನಿಂದಲೂ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ. ನೆನ್ನೆಯಶ್ಟೆಟೆ ತಮ್ಮ 40 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅಲ್ಲು ಅರ್ಜುನ್ ಹಾಗೂ ಸ್ನೇಹ ರೆಡ್ಡಿ ಅವರ ನೈಜ ಪ್ರೇಮಕಥೆಯನ್ನು ನಿಮಗೆ ಹೇಳುತ್ತೇವೆ. ಹಾಗಾದರೆ ಅಲ್ಲು ಸ್ನೇಹ ರೆಡ್ಡಿ ಅವರ ಜೊತೆಗಿನ ಲವ್ ಸ್ಟೋರಿ ಹೇಗೆ ಶುರುವಾಯಿತು.
ಒಂದು ದಶಕದ ಹಿಂದೆ, ಅಲ್ಲು ಅರ್ಜುನ್ ತನ್ನ ಸ್ನೇಹಿತನ ಮದುವೆಯಲ್ಲಿ ಪಾಲ್ಗೂಳ್ಳಲು ಹೋಗಿದ್ದರಂತೆ ಅಲ್ಲಿ ಸ್ನೇಹ ಕೂಡ ಹಾಜರಿದ್ದರಂತೆ. ಇಲ್ಲಿ ಇಬ್ಬರು ಭೇಟಿಯಾದರಂತೆ ನಟನ ಸ್ನೇಹಿತ ಸ್ನೇಹಾಗೆ ಪರಿಚಯಿಸಿದರು. ಅಲ್ಲು ಅರ್ಜುನ್ ಮತ್ತು ಸ್ನೇಹ ಅವರು ಮೊದಲ ನೋಟದಲ್ಲೆ ಪ್ರೀತಿಯಲ್ಲಿ ಸಿಲುಕಿದರು. ಇದಾದ ನಂತರ ಅರ್ಜುನ್ ಸ್ನೇಹಾಳನ್ನು ಹಿಂಬಾಲಿಸುತ್ತಾರೆ. ಆಗ ನಟನ ಸ್ನೇಹಿತ ಕೂಡ ಸ್ನೇಹಾಗೆ ಮಸೇಜ್ ಮಾಡುವಂತೆ ಒತ್ತಡ ಹೇರಿದರು. ಅವರು ಹಾಗೆಯೇ ಮಾಡುತ್ತಾರೆ. ಸಂದೇಶವನ್ನು ಸ್ವೀಕರಿಸಿದ ನಂತರ, ಸ್ನೇಹ ಕೂಡ ಉತ್ತರವನ್ನು ಕಳುಹಿಸುತ್ತಾರೆ. ನಂತರ ಇಬ್ಬರೂ ಫೋನ್ನಲ್ಲಿ ಮಾತನಾಡಿದ ನಂತರ ಶೀಘ್ರದಲ್ಲೆ ಭೇಟಿಯಾಗಲು ನಿರ್ಧರಿಸಿದರು.
ಮದುವೆ ಕಾರ್ಯದ ನಂತರ ಅವರ ಮೊದಲ ಭೇಟಿಯು ತುಂಬಾ ಆಸಕ್ತಿದಾಯಕವಾಗಿತ್ತು. ನಂತರ ಇಬ್ಬರೂ ಅನೇಕ ಡೇಟ್ ಗಳಲ್ಲಿ ಭೇಟಿಯಾದರು. ಈ ಮೂಲಕ ಇಬ್ಬರೂ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಲು ಸಹಾಯವಾಯಿತು. ಅವರ ನಡುವೆ ಪ್ರೀತಿ ಹುಟ್ಟಿತು. ನಂತರ ಈ ಜೋಡಿಯ ಮನಸ್ಸಿನಲ್ಲಿ ಮದುವೆಯಾಗುವ ಆಲೋಚನೆ ಬಂದಿತು. ಆದರೆ ಇಬ್ಬರೂ ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ರಹಸ್ಯವಾಗಿಟ್ಟಿದ್ದರು.
ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಅವರ ಸಂಬಂಧದ ಬಗ್ಗೆ ತಿಳಿದುಕೊಂಡರು. ಆಗ ಪುಷ್ಪಾ ಸ್ಟಾರ್ ತನಗೆ ಸ್ನೇಹಾ ಇಷ್ಟವಾಗಿದ್ದು ಮದುವೆಯಾಗಲು ಇಚ್ಚಿಸುವುದಾಗಿ ತಿಳಿಸಿದ್ದಾರೆ. ಆದರೆ, ಆರಂಭದಲ್ಲಿ ಇಬ್ಬರ ಪೋಷಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಆದರೂ ಅಲ್ಲು ಮತ್ತು ಸ್ನೇಹ ಒಬ್ಬರನ್ನೊಬ್ಬರು ಬಿಡಲಿಲ್ಲ. ಬಳಿಕ ಇಬ್ಬರ ಪೋಷಕರೂ ಕೂಡ ತಮ್ಮ ಮಕ್ಕಳ ಆಸೆ ಈಡೇರಿಸಲು ಒಪ್ಪಿಗೆ ಸೂಚಿಸುತ್ತಾರೆ.
ನವೆಂಬರ್ 26,2010 ರಂದು ಹೈದರಾಬಾದ್ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಲ್ಲು ಅರ್ಜುನ್ ಮತ್ತು ಸ್ನೇಹಾ ನಿಶ್ಚಿತಾರ್ಥ ಮಾಡಿಕೊಂಡರು. ಈವೆಂಟ್ ಥೀಮ್ ಹಳದಿ ಮತ್ತು ಬಿಳಿ. ಏತನ್ಮಧ್ಯೆ, ಸ್ನೇಹಾ ಗುಲಾಬಿ ಬಣ್ಣದ ಸಬ್ಯಸಾಚಿ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದರೆ, ಅಲ್ಲು ಅರ್ಜುನ್ ಬಿಳಿ ಶೆರ್ವಾನಿ ಧರಿಸಿದ್ದರು. ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬ ಆಪ್ತರು ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು.
ನಿಶ್ಚಿತಾರ್ಥವಾದ ಮೂರು ತಿಂಗಳ ನಂತರ, ಮಾರ್ಚ್ 6,2011 ರಂದು ಅರ್ಜುನ್ ಮತ್ತು ಸ್ನೇಹಾ ವಿವಾಹವಾದರು. ಈ ಸಮಯದಲ್ಲಿ, ಸ್ನೇಹಾ ಗೋಲ್ಡನ್ ಮತ್ತು ಕಿತ್ತಳೆ ಬಣ್ಣದ ಕಾಂಚೀವರಂ ಸೀರೆಯನ್ನು ಧರಿಸಿದರು, ಆದರೆ ಅಲ್ಲು ಅರ್ಜುನ್ ಬಿಳಿ ಶೆರ್ವಾನಿಯಲ್ಲಿ ಕಾಣಿಸಿಕೊಂಡರು. ಸೂಪರ್ ಸ್ಟಾರ್ ಅವರ ಅದ್ದೂರಿ ವಿವಾಹವನ್ನು ಹಲವಾರು ಸುದ್ದಿ ವಾಹಿನಿಗಳಲ್ಲಿ ಪ್ರಾಸಾರ ಮಾಡಲಾಯಿತು.
ಅಲ್ಲು ಅರ್ಜುನ್ ಮತ್ತು ಸ್ನೇಹಾ 2014 ರಲ್ಲಿ ಮೊದಲ ಬಾರಿಗೆ ಪೋಷಕರಾದರು. ದಂಪತಿಗಳು ತಮ್ಮ ಮಗನಿನೆ ಅಲ್ಲು ಅಯಾನ್ ಎಂದು ಹೆಸರಿಸಿದರು. ಎರಡು ವರ್ಷಗಳ ನಂತರ, ದಂಪತಿಗಳು ಅಲ್ಲು ಅರ್ಹ ಎಂಬ ಹೆಣ್ಣು ಮಗುವನ್ನು ಸ್ವಾಗತಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada