ಬಾಲಿವುಡ್ ನ ಬಹು ನಿರೀಕ್ಷಿತ ಮದುವೆಯೊಂದು ಶೀಘ್ರದಲ್ಲೇ ನಡೆಯಲಿದೆ. ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಪತಿ–ಪತ್ನಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಒಂದು ಮೂಲದ ಪ್ರಕಾರ, ರಣಬೀರ್ ಮತ್ತು ಆಲಿಯಾ ಏಪ್ರಿಲ್ ತಿಂಗಳಲ್ಲೇ ವಿವಾಹವಾಗಲಿದ್ದಾರೆ.
ಖಾಸಗಿ ವಿವಾಹ ಸಮಾರಂಭದಲ್ಲಿ ಕೆಲವು ಅತಿಥಿಗಳು ಹಾಗೂ ನಿಕಟ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿ ತಿಳಿಸಿದೆ.
ರಣಬೀರ್ ಮತ್ತು ಆಲಿಯಾ ಏಪ್ರಿಲ್ ನಲ್ಲಿ ಮದುವೆಯಾಗುತ್ತಾರೆ ಎಂದು ಬಲವಾದ ಸುದ್ದಿಯಿದೆ. ಇತ್ತೀಚೆಗೆ, ರಣಬೀರ್ ಅವರ ತಾಯಿ ನೀತು ಕಪೂರ್, ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಮನೀಶ್ ಅವರು ನೀತು ಕಪೂರ್ ನಿವಾಸಲ್ಲಿ ಕಾಣಿಸಿಕೊಂಡರು. ಅಲ್ಲದೆ ರಣಬೀರ್ ಮತ್ತು ಆಲಿಯಾ ಚಿತ್ರೀಕರಣದಿಂದ ಬಿಡುವು ಕೇಳಿದ್ದಾರೆ” ಎಂದು ಮೂಲಗಳನ್ನು ಉದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಮೂಲಗಳ ಪ್ರಕಾರ, ವಿವಾಹ ಸಮಾರಂಭವು ಮುಂಬೈನ ಚೆಂಬೂರಿನಲ್ಲಿರುವ ರಣಬೀರ್ ಕಪೂರ್ ಮನೆಯಲ್ಲಿ ನಡೆಯಲಿದೆ. ರಾಜಸ್ಥಾನದ ಉದಯಪುರದಲ್ಲಿ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada