ಹೌಸ್​ ಪಾರ್ಟಿ ಮೂಡ್​ನಲ್ಲಿ ALL OK

 

ಹೊಸ ಪ್ರಯೋಗಗಳ ಮೂಲಕ
ಯೂಟ್ಯೂಬ್​ನಲ್ಲಿ ಸದಾ ಸುದ್ದಿಯಲ್ಲಿರುವ ರ‍್ಯಾಪರ್,
ಸಿಂಗರ್​, ಕಂಪೋಸರ್​ ALL OK ಅಲಿಯಾಸ್​ ಅಲೋಕ್​. ಇದೀಗ ಸದ್ದಿಲ್ಲದೆ ಮತ್ತೊಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅದರ ಹೆಸರು “ಹೌಸ್​ ಪಾರ್ಟಿ’.
ಈ ಹಾಡಿನ ವಿಶೇಷತೆ ಹೇಳಿಕೊಳ್ಳಲೆಂದೆ ಇಡೀ ತಂಡ ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಂದಿತ್ತು. ಹಾಡಿನ ಬಗ್ಗೆ, ಶೂಟಿಂಗ್​ ಅನುಭವದ ಬಗ್ಗೆಯೂ ತಂಡ ಮಾಹಿತಿ ಹಂಚಿಕೊಂಡಿತು.
ಮೊದಲಿಗೆ ಮಾತನಾಡಿದ ಹಾಡಿಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಮಾಡಿರುವ ಅಲೋಕ್​, ಇದು “ಕೋವಿಡ್​ ಸಮಯದಲ್ಲಿನ ಕಾನ್ಸೆಪ್ಟ್​ವೊಂದರಿಂದ ಪ್ರೇರಣೆ ಪಡೆದು “ಹೌಸ್​ ಪಾರ್ಟಿ’ ಹಾಡನ್ನು ಹೊರತಂದಿದ್ದೇನೆ. ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಕಲರ್ ಫುಲ್ ಆಗಿ ತೋರಿಸಿದ್ದೇವೆ. ಗೋಕರ್ಣದ ಕಹಾನಿ ಪ್ಯಾರಡೈಸ್​ ರೆಸಾರ್ಟ್​ನಲ್ಲಿ ಇಡೀ ಹಾಡಿನ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ .

“ಬೇರೆ ಭಾಷೆಗಳ ಆಲ್ಬಂಗಳಿಗೆ ಸಿಗುವ ರೆಸ್ಪಾನ್ಸ್​ ಕನ್ನಡದ ಆಲ್ಬಂ ಹಾಡುಗಳಿಗೆ ಸಿಗುತ್ತಿಲ್ಲ. ಆದರೆ, ನಮ್ಮ ಹಾಡುಗಳು ಬೇರಾವ ಭಾಷೆಗಿಂತಲೂ ಕಡಿಮೆಯಿಲ್ಲ. ಅದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವುದು ವಿಪರ್ಯಾಸ’ ಎಂದು ಅಲೋಕ್​ ಕಳವಳ ವ್ಯಕ್ತಪಡಿಸಿದರು.

ಈಗಾಗಲೇ ಕಿರಿಕ್​ ಶಂಕರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಅದ್ವಿಕಾ ಈ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. “ಇದು ನನ್ನ ಮೊದಲ ಆಲ್ಬಂ. ತುಂಬ ಖುಷಿ ಎನಿಸುತ್ತದೆ. ಆರಂಭದಲ್ಲಿಯೇ ಈ ರೀತಿಯ ಅವಕಾಶಗಳು ಸಿಗುತ್ತಿವೆ. ಎಲ್ಲಿಯೂ ನಮಗೆ ಶೂಟಿಂಗ್​ ಅನಿಸಲೇ ಇಲ್ಲ. ಪಾರ್ಟಿ ಮಾಡಿದ ಖುಷಿ ಆಯಿತು’ ಎನ್ನುತ್ತಾರೆ ಅದ್ವಿಕಾ.

ಈ ಆಲ್ಬಂ ಗೆ ಆಕಾಶ್​ ಜೋಷಿ ಛಾಯಾಗ್ರಹಣದ ಜತೆಗೆ ಸಂಕಲನವನ್ನೂ ಮಾಡಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆಯೇ..?

Thu Mar 24 , 2022
ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಇದೀಗ ಬಾಲಿವುಡ್‌ನ ಆಸ್ತಿಯಾಗಿದ್ದಾರೆ.ಇವರಿಬ್ಬರು ಮುಂಬೈನ ಭೋಜನ ಶಾಲೆಯ ಹೊರಗೆ ಕಾಣಿಸಿಕೊಂಡಾಗಿನಿಂದ ವದಂತಿಯಾಗಿದ್ದಾರೆ.ರಹಸ್ಯವಾಗಿ ತಿರುಗಾಡುತ್ತಿದ್ದಾರೆ.ಹೃತಿಕ್ ಅವರ ಕುಟುಂಬ ದೊಂದಿಗೆ ಸಬಾ ಸಮಯ ಕಳೆಯುವುದನ್ನು ನಾವು ನೋಡಿದ್ದೇವೆ.ಹೃತಿಕ್ ಅವರ ಮನೆಯಲ್ಲಿ ಕಳುಹಿಸುವುದನ್ನು ನಾವು ನೋಡಿದ್ದೇವೆ ಮತ್ತು ಸಬಾ ಮತ್ತು ಹೃತಿಕ್ ಅವರ ಮಾಜಿ ಪತ್ನಿ ಸುಸ್ಸಾನ್ನೆ ಖಾನ್ ಅವರು ಅದನ್ನು ಬೆಸ್ಟ್ಲಿಗಳಂತೆ ಹೊಡೆದಿದ್ದಾರೆ.ಈ ಕುಟುಂಬ ಭೇಟಿಗಳು ಹೃತಿಕ್ ರೋಷನ್ ಮತ್ತು ಸಾಬಾ ಆಜಾದ್‌ ಶೀಘ್ರದಲ್ಲೇ ಮದುವೆಯ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: