ನಿತ್ಯ ಸಾವು ನೋವನ್ನು ಕಂಡ ಆ್ಯಂಬುಲೈನ್ಸ್ ಚಾಲಕನ ಮಹತ್ವದ ಕಾರ್ಯವೊಂದನ್ನು ಮಾಡುವ ಮೂಲಕ ಮಾದರಿಯಾಗಿದ್ದಾರೆ. ತಾವು ಮೃತಪಟ್ಟ ನಂತರ ತಮ್ಮ ಕಣ್ಣು ಮತ್ತು ದೇಹದಾನ ಮಾಡೋ ಮೂಲಕ ಇಬ್ಬರು ಕಣ್ಣಿಲ್ಲದವರಿಗೆ ಸಹಾಯ ಮಾಡೋದ್ರ ಜೊತೆಗೆ ದೇಹ ದಾನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದ್ದಾರೆ. ಹೌದು, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ 108 ಆ್ಯಂಬುಲೈನ್ಸ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿರಗುಪ್ಪ ಪಟ್ಟಣದ ಡಿ.ವಡಿವೇಲು (42) ನೇತ್ರದಾನದ ಜೊತೆಗೆ ದೇಹದಾನ ಮಾಡಿರೋ ಚಾಲಕ. ವಡಿವೇಲು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಕುಟುಂಬ ಸದಸ್ಯರ ಅನುಮತಿ ಮೇರೆಗೆ ಮತ್ತು ವಡಿವೇಲು ಅವರ ಇಚ್ಛೆಯಂತೆ ನೇತ್ರ ಮತ್ತು ದೇಹವನ್ನು ದಾನ ಮಾಡಲಾಗಿದೆ. ಕೊರೋನಾ ವೇಳೆ ಅತಿ ಹೆಚ್ಚು ಸಾವನ್ನು ಕಂಡಿದ್ದರು. ಹೀಗಾಗಿ ಜೀವನ ನಶ್ವರ ಪ್ರೀತಿ, ಪ್ರೇಮ, ಸ್ನೇಹವೇ ಶಾಶ್ವತ. ನಾವು ಮಾಡಿದ ಕೆಲಸ ಶಾಶ್ವತವಾಗಿ ಉಳಿಯಬೇಕೆ ಹೊರತು ಮಣ್ಣಿಗೆ ಹೋಗೋನಮ್ಮ ದೇಹವಲ್ಲ ಎನ್ನುತ್ತಿದ್ರು. ಅಲ್ಲದೇ ಕೊರೋನಾ ವೇಳೆ ಸಾವು ನೋವನ್ನು ಕಂಡ ಅವರಿಗೆ ದೇಹದ ಮೇಲಿನ ವ್ಯಾಮೋಹ ಕಡಿಮೆಯಾಗಿತ್ತಂತೆ. ನಾವು ಮೃತಪಟ್ಟ ಬಳಿಕವೂ ನಾಲ್ವರಿಗೆ ಸಹಕಾರಿಯಾಗಬೇಕೆಂದು ನಿರ್ಧಾರ ಮಾಡಿ ದೇಹ ಮತ್ತು ನೇತ್ರದಾನ ಪತ್ರಕ್ಕೆ ಸಹಿ ಮಾಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada