ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ವೋಹನ್ ರೆಡ್ಡಿ ಸಂಪುಟದ ಎಲ್ಲ ಸದಸ್ಯರು ಗುರುವಾರ ರಾಜೀನಾಮೆ ನೀಡಿದ್ದಾರೆ.ಸಚಿವ ಸಂಪುಟ ಸಭೆಯ ನಂತರ 24 ಮಂತ್ರಿಗಳು ರಾಜೀನಾಮೆ ಸಲ್ಲಿಸಿದರು. ಸಂಪುಟದಲ್ಲಿ ಜಗನ್ ಒಬ್ಬರೇ ಉಳಿದಿದ್ದು ಅವರು ರಾಜೀನಾಮೆ ಸ್ವೀಕರಿಸಿದರು. 2024ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ನಡೆಯಲಿರುವ ಪುನಾರಚನೆ ಕಸರತ್ತಿನಲ್ಲಿ ರೆಡ್ಡಿ ಬಹುತೇಕ ಹೊಸಬರಿಗೆ ಮಣೆ ಹಾಕುವ ಸಂಭವವಿದೆ. ಡಿಸೆಂಬರ್ನಲ್ಲಿ ಆಗಬೇಕಿದ್ದ ಸಂಪುಟ ಪುನಾರಚನೆಯನ್ನು ಕರೊನಾ ಕಾರಣ ಮುಂದೂಡಲಾಗಿತ್ತು. ಹೊಸ ಸಂಪುಟದಲ್ಲಿ ನಿರ್ಗಮನ ಸಂಪುಟದ ಒಬ್ಬಿಬ್ಬರಿಗಷ್ಟೇ ಅವಕಾಶ ಸಿಗುವ ಸಂಭವವಿದೆ ಎಂದು ಮೂಲಗಳು ಹೇಳಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada