ಅಪ್ಪು ನಿಧನರಾಗಿ ಇವತ್ತಿಗೆ ಐದು ತಿಂಗಳು, ಕುಟುಂಬ ಸದಸ್ಯರು ಸಮಾಧಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ಸಮಾಧಿಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭೇಟಿ ನೀಡಿದ್ದು, ನಮನ ಸಲ್ಲಿಸಿದ್ದಾರೆ. ಇಂದು ಪುನೀತ್ ಅವರ ಸಮಾಧಿಗೆ ಭೇಟಿ ಟಾಲಿವುಡ್ ಹಾಗೂ ಬಾಲಿವುಡ್ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭೇಟಿ ನೀಡಿ, ಪುನೀತ್ಗೆ ನಮನ ಸಲ್ಲಿಸಿದ್ದಾರೆ.
ಅನಂತರ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ”ಪುನೀತ್ ಒಬ್ಬ ಒಳ್ಳೆ ನಟ ಮಾತ್ರ ಅಲ್ಲ. ಒಬ್ಬ ಒಳ್ಳೆ ವ್ಯಕ್ತಿ ಕೂಡ ಆಗಿದ್ದರು. ಕಿಲ್ಲಿಂಗ್ ವೀರಪ್ಪನ್ ಚಿತ್ರೀಕರಣದ ಸಮಯದಲ್ಲಿ ಎರಡು ಭಾರಿ ಭೇಟಿಯಾಗಿದ್ದೆ” ಎಂದು ನುಡಿದಿದ್ದಾರೆ. ಅಪ್ಪು ಸಮಾಧಿಗೆ ನಮನ ಸಲ್ಲಿಸಿದ ನಂತರ ಪಾರ್ವತಮ್ಮ ರಾಜ್ಕುಮಾರ್ ಅವರ ಸಮಾಧಿಗೂ ಆರ್ಜಿವಿ ನಮನ ಸಲ್ಲಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada