ಈಗಾಗಲೇ ಟೈಟಲ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ಅಜಯ್ ರಾವ್ ಹಾಗೂ ಸಂಜನಾ ಆನಂದ್ ಅಭಿನಯದ ಬಹುನಿರೀಕ್ಷಿತ ‘ಶೋಕಿವಾಲಾ’ ಸಿನಿಮಾ ಏಪ್ರಿಲ್ 29ರಂದು ತೆರೆಕಾಣಲಿದೆ. ಜಾಕಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಡಾ.ಟಿ ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ನೀಡಿದ್ದಾರೆ.ಈ ಚಿತ್ರದಲ್ಲಿ ತಬಲಾ ನಾಣಿ, ಪ್ರಮೋದ್ ಶೆಟ್ಟಿ, ಅರುಣ ಬಾಲರಾಜ್, ಲಾಸ್ಯ ಹಾಗೂ ಶರತ್ ಲೋಹಿತಾಶ್ವ ಸೇರಿದಂತೆ ಮೊದಲಾದ ಕಲಾವಿದರು ತೆರೆಹಂಚಿಕೊಂಡಿದ್ದಾರೆ. ಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನಡಿನಿರ್ಮಾಣವಾಗಿರುವ ಈ ಸಿನಿಮಾ ಹಾಡುಗಳು ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿವೆ.
Next Post
ಉಕ್ರೇನ್ ವಿರುದ್ಧದ ಯುದ್ಧದಲ್ಲಿ 1,351 ಸೇನಾ ಸೈನಿಕರ ಸಾವು..!
Sat Mar 26 , 2022
ಉಕ್ರೇನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಕಡೆಯ 1,351 ಸೈನಿಕರು ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ಸೇನಾ ಪಡೆಗಳ ಉಪ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ. ಉಕ್ರೇನ್ನಲ್ಲಿ ನಡೆದಿರುವ ನಾಲ್ಕು ವಾರಗಳ ಯುದ್ಧದಲ್ಲಿ 7,000 ರಿಂದ 15,000 ರಷ್ಯಾದ ಸೈನಿಕರು ಮೃತಪಟ್ಟಿದ್ದಾರೆ ಎಂದು ನ್ಯಾಟೊ ಬುಧವಾರ ಅಂದಾಜಿಸಿತ್ತು.ಈ ಕಾರ್ಯಾಚರಣೆಯಲ್ಲಿ 3,825 ಯೋಧರು ಗಾಯಗೊಂಡಿದ್ದಾರೆ ಎಂದು ಜನರಲ್ ಸೆರ್ಗೆಯ್ ರುಡ್ಸ್ಕೊಯ್ ತಿಳಿಸಿದರು. ಪೂರ್ವ ಉಕ್ರೇನ್ನಲ್ಲಿ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಮತ್ತು ರಾಷ್ಟ್ರೀಯ […]

You May Like
-
10 months ago
ಮೇ ತಿಂಗಳಲ್ಲಿ ಅಪ್ಪು ಮತ್ತೆ ತೆರೆಯ ಮೇಲೆ!
-
11 months ago
ಜೇಮ್ಸ್ ಚಿತ್ರಕ್ಕೆ ಯಾವುದೇ ಅಡ್ಡಿಯಿಲ್ಲ: ಸಿ ಎಂ ಬೊಮ್ಮಯಿ
-
11 months ago
ಉಪ್ಪಿ ಕಂಠಸಿರಿಯಲ್ಲಿ “ಹುಷಾರ್” ಹಾಡು.
-
10 months ago
ಸಂಸಾರ ಸಾಗರ”ದಲ್ಲಿ ಕಲಾವಿದರ ದಂಡು