ರಾಜ್ಯದಲ್ಲಿ ಪೆರೋಲ್ ಉಲ್ಲಂಘನೆ ಸಂದರ್ಭದಲ್ಲಿ, ಜಾಮೀನು ನೀಡಿದ ವ್ಯಕ್ತಿಯ ಆಸ್ತಿ ಪಾಸ್ತಿ ಜಪ್ತಿ ಮಾಡುವಂತ ತಿದ್ದುಪಡಿ ವಿಧೇಯಕಕ್ಕೆ, ಪರಿಷತ್ ನಲ್ಲಿ ಅಂಗೀಕಾರ ದೊರೆತಿದೆ. ಹೀಗಾಗಿ ಇನ್ಮುಂದೆ ಪೆರೋಲ್ ಖೈದಿ ನಾಪತ್ತೆಯಾದ್ರೇ, ಜಾಮೀನು ಕೊಟ್ಟವರ ಆಸ್ತಿ ಜಪ್ತಿಯಾಗಲಿದೆ.
ಕಾಂಗ್ರೆಸ್-ಜೆಡಿಎಸ್ ಪಕ್ಷದ ಸದಸ್ಯರ ತೀವ್ರ ವಿರೋಧ, ಸಭಾತ್ಯಾಗದ ನಡುವೆಯೂ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಕರ್ನಾಟಕ ಬಂಧೀಖಾನೆಗಳ (ತಿದ್ದುಪಡಿ) ವಿಧೇಯಕ-2022ನ್ನು ವಿಧಾನ ಪರಿಷತ್ ನಲ್ಲಿ ಮಂಡಿಸಿದರು. ಈ ವಿಧೇಯಕಕ್ಕೆ ಅಂಗೀಕಾರ ಕೂಡ ದೊರೆತಿದೆ.
ಈ ಬಗ್ಗೆ ಮಾತನಾಡಿದಂತ ಅವರು, ಈ ವಿಧೇಯಕವನ್ನು ಪೆರೋಲ್ ಪಡೆದ ವ್ಯಕ್ತಿಗೆ ಜಾಮೀನು ನೀಡುವ ವ್ಯಕ್ತಿ ಜವಾಬ್ದಾರಿ ಹೊಂದಿರಬೇಕು ಎಂಬ ಕಾರಣದಿಂದಾಗಿ ತರಲಾಗಿದೆ. ಈ ತಿದ್ದು ಪಡಿಯಿಂದಾಗಿ ನ್ಯಾಯಯುತವಾಗಿ ಜಾಮೀನು ನೀಡಿದ ವ್ಯಕ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಜಾಮೀನು ನೀಡುವುದನ್ನೇ ದಂಧೆ ಮಾಡಿಕೊಂಡವರಿಗೆ, ಆ ಕೆಲಸ ಮಾಡಬಾರದು ಎಂಬ ಕಾರಣದಿಂದ ಈ ತಿದ್ದುಪಡಿ ಮಾಡಲಾಗಿದೆ. ಈವರಗೆ 15 ಖೈದಿಗಳು ಪೆರೋಲ್ ಮೇಲೆ ತೆರಳಿ ನಾಪತ್ತೆಯಾಗಿದ್ದಾರೆ ಎಂದರು.
ಕರ್ನಾಟಕ ಬಂಧೀಖಾನೆಗಳ ತಿದ್ದುಪಡಿ ವಿಧೇಯಕದ ಅನುಸಾರವಾಗಿ, ಇನ್ಮುಂದೆ ಪೆರೋಲ್ ಕೈದಿ ನಾಪತ್ತೆಯಾದ್ರೇ, ಜಾಮೀನು ಕೊಟ್ಟವರ ಆಸ್ತಿ ಜಪ್ತಿಯಾಗಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada