ಶೋಕಿಗಾಗಿ ಮನೆ ಮುಂದೆ ನಿಲ್ಲಿಸಿದ್ದ ಆಟೋಗಳನ್ನ ಕಳ್ಳತನ ಮಾಡುತ್ತಿದ್ದ ಕಾನೂನು ಆಪರಾಧಕ್ಕೆ ಒಳಗಾದವನ್ನನ್ನು ಕೆಂಗೇರಿ ಪೋಲೀಸ್ ಠಾಣೆಯ ಪೋಲಿಸರು ಬಂಧಿಸಿದ್ದಾರೆ.
ಜೆ.ಪಿ. ನಗರ ನಿವಾಸಿ ಆದ ಈತ 15 ಲಕ್ಷ ರೂ. ಮೌಲ್ಯದ 6 ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗೆ ಆಟೋ ಚಲಾಯಿಸುವುದು ಅಭ್ಯಾಸ ಮಡಿಕೊಂಡಿದ್ದ ಹೀಗಾಗಿ ಮನೆ ಮುಂದೆ ನಿಲ್ಲಿಸಿದ್ದ ಆಟೋಗಳನ್ನು ಕಳವು ಮಾಡುತ್ತಿದ್ದ. ಬಳಿಕ ನಗರದೆಲ್ಲೆಡೆ ಓಡಾಟ ನಡೆಸಿ, ಇಂಧನ ಅಥವಾ ಗ್ಯಾಸ್ ಖಾಲಿಯಾಗುತ್ತಿದ್ದಂತೆ ಎಲ್ಲೆಂದರಲ್ಲಿ ನಿಲ್ಲಿಸಿ ಪರಾರಿಯಾಗುತ್ತಿದ್ದ.ಇತ್ತೀಚೆಗೆ ಕೆಂಗೇರಿ ಪೋಲಿಸ್ ಠಾಣೆ ವಾಪ್ತಿಯಲ್ಲಿ ಮನೆಯೊಂದರ ಮುಂದೆ ನಿಲ್ಲಿಸಿದ್ದ ಆಟೋವನ್ನು ಕಳವು ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ,ಆಪರಾಧ ನಡೆದ ಸ್ಥಳದ ಸಮೀಪದಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಆರೋಪಿಯ ಮುಖ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ಕೆಂಗೇರಿ ಪೊಲೀಸರು ಹೇಳಿದರು.