ಚಳಿಗಾಲದಲ್ಲಿ ನಮ್ಮನ್ನು ನಾವು ಎಷ್ಟು ಆರೋಗ್ಯವಾಗಿಟ್ಟುಕೊಂಡರೂ ಕಡಿಮೆಯೇ ಚಳಿಗಾಲದಲ್ಲಿ ನಾವು ಬೇಗನೇ ಅನಾರೋಗಕ್ಕೀಡಾಗುತ್ತೆವೆ..ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ಸೂರ್ಯನ ಬೆಳಕು ವಿಟಮಿನ್ ಡಿ ಯು ಇದರ ಮುಖ್ಯ ಮೂಲವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ ಮೂಳೆ ಮತ್ತು ಸ್ನಾಯುಗಳಿಗೆ ಬಲವನ್ನು ನೀಡುತ್ತದೆ. ಚಳಿಗಾಲದಲ್ಲಿ ಈ ಪ್ರಯೋಜನಗಳನ್ನು ಪಡೆಯಲು, ಆರೋಗ್ಯಕರ ಆಹಾರ ಮತ್ತು ಪಾನೀಯವನ್ನು ಸೇವಿಸುವುದು ಬಹಳ ಮುಖ್ಯವಾಗಿದೆ. ಅರಿಶಿನ ಹಾಲು ಕುಡಿಯುವ ರೂಢಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ. ಇದನ್ನು ಚಿನ್ನದ ಹಾಲು ಎಂದೂ ಕರೆಯುತ್ತಾರೆ. ಅತ್ಯದ್ಭುತ ಪೌಷ್ಠಿಕಾಂಶಗಳನ್ನು ಹೊಂದಿರುವ ಅರಿಶಿನ ಹಾಲನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ದೂರ ವಾಗುವುದಲ್ಲದೆ, ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅರಿಶಿನ ಹಾಲು ಆಂಟಿವೈರಲ್ ಮತ್ತು ಆಂಟಿಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವುದರಿಂದ ಕೆಮ್ಮು ಮತ್ತು ಶೀತವನ್ನು ಹೋಗಲಾಡಿಸುತ್ತದೆ. ಗಂಟಲು ನೋಯುತ್ತಿದ್ದರೆ ಅರಿಶಿನ ಹಾಲನ್ನು ಕುಡಿಯಿರಿ. ಅರಿಶಿನದ ಹಾಲು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಅಸ್ತಮಾ, ಬ್ರಾಂಕೈಟಿಸ್ಗೆ ಪರಿಣಾಮಕಾರಿ ಪರಿಹಾರವಾಗಿದೆ. ಸೈನಸ್ ಮತ್ತು ಶ್ವಾಸಕೋಶದ ಸಮಸ್ಯೆಯಿದ್ದರೂ ಪರಿಹಾರ ನೀಡುತ್ತದೆ.
-ಭಾವನ