ಬೆಂಗಳೂರಿನಲ್ಲಿರುವ ಮುಸ್ಲಿಂ ಹೆಸರಿನ ಏರಿಯಾ,ರಸ್ತೆಗಳ ಹೆಸರು ಬದಲಿಸಲು BJP ಸಿದ್ಧತೆ!
ಉತ್ತರ ಪ್ರದೇಶದ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿ ಮುಸ್ಲಿಂ ಹೆಸರಿನಲ್ಲಿರುವ ರಸ್ತೆ ಮತ್ತು ನಗರಗಳು ಮರುನಾಮಕರಣಕ್ಕೆ ರಾಜ್ಯ ಬಿಜೆಪಿ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ಒಂದಾದ ನಂತರ ಒಂದು ವಿವಾದಗಳು ಅಭಿಯಾನದ ರೂಪದಲ್ಲಿ ಹೊರ ಬರುತ್ತಿವೆ. ಕಳೆದು ಮೂರು ತಿಂಗಳನಿಂದ ಇಂತಹ ಪ್ರಕ್ಷುಬ್ಧ ವಿವಾದಗಳಿಂದಲೇ ಕರ್ನಾಟಕ ದೇಶದಲ್ಲಿ ಸುದ್ದಿಯಾಗುತ್ತಿದೆ. ಹಿಜಾಬ್ ಹಲಾಲ್ ಕಟ್ ಜಟಕಾ ಕಟ್ ಆಜಾನ್ ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಮಾವಿನ ಹಣ್ಣಿನ ಖರೀದಿ ಟ್ಯಾಕ್ಸಿಯಲ್ಲಿ ಹಿಂದೂಗಳಿಗೆ ಆದ್ಯತೆ ಇಂತಹ ಹಲವು ವಿಷಯಗಳಿಂದ ರಾಜ್ಯದಲ್ಲಿ ಒಂದು ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದು, ಈ ಸಂಬಂಧ ವ್ಯಾಪಕ ಚರ್ಚೆಗಳು ಸಹ ನಡೆಯುತ್ತಿದೆ. ಆದ್ರೆ ಯಾವ ಚರ್ಚೆಗಳು ಇನ್ನೂ ಅಂತಿಮ ತೀರ್ಮಾನಕ್ಕೆ ಬರದೇ ಪ್ರಶ್ನೆಯಲ್ಲಿಯೇ ಕೊನೆಗೊಳ್ಳುತ್ತಿವೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಉತ್ತರ ಪ್ರದೇಶದ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿ ಮುಸ್ಲಿಂ ಹೆಸರಿನಲ್ಲಿರುವ ರಸ್ತೆ ಮತ್ತು ನಗರಗಳು ಮರುನಾಮಕರಣಕ್ಕೆ ರಾಜ್ಯ ಬಿಜೆಪಿ ಸಿದ್ಧತೆ ನಡೆಸಿದೆ. ಈ ನಿರ್ಧಾರಕ್ಕೆ ಹಿಂದೂ ಪರ ಸಂಘಟನೆಗಳು ಸಾಥ್ ನೀಡಿವೆ. ರಾಜಧಾನಿ ಬೆಂಗಳೂರಿನಲ್ಲಿ 300ಕ್ಕೂ ಅಧಿಕ ರಸ್ತೆಗಳು ಹಿಂದೂಯೇತರರ ಹೆಸರಿನಲ್ಲಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada