‘ಬೀಸ್ಟ್’ ಚಿತ್ರದ್ದು ಕದ್ದ ಕಥೆಯೇ?

 

ಹಾಲಿವುಡ್​ ಚಿತ್ರದಿಂದಲೇ ಸ್ಫೂರ್ತಿ ಪಡೆದು ‘ಬೀಸ್ಟ್’ ಸಿನಿಮಾದ ಕಥೆಗೆ ಹೆಣೆಯಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಸಿನಿಪ್ರಿಯರ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಬೀಸ್ಟ್​’ ಚಿತ್ರ ( Beast Movie) ಕೂಡ ಗಮನ ಸೆಳೆಯುತ್ತಿದೆ.

ಏ.13ರಂದು ಈ ಸಿನಿಮಾ ಅದ್ದೂರಿಯಾಗಿ ರಿಲೀಸ್​ ಆಗಲಿದೆ. ‘ದಳಪತಿ’ ವಿಜಯ್​ (Thalapathy Vijay) ಈ ಚಿತ್ರಕ್ಕೆ ಹೀರೋ. ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಅವರು ‘ಬೀಸ್ಟ್​’ ಸಿನಿಮಾಗೆ ಆಯಕ್ಷನ್​-ಕಟ್​ ಹೇಳಿದ್ದಾರೆ. ಹಲವು ಕಾರಣಗಳಿಂದಾಗಿ ಈ ಚಿತ್ರ ಹೈಪ್​ ಸೃಷ್ಟಿ ಮಾಡಿದೆ. ವಿಜಯ್​ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಅದನ್ನು ಗಮನದಲ್ಲಿ ಇಟ್ಟುಕೊಂಡು

ಸಿನಿಮಾವನ್ನು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಮಾಡಲಾಗುತ್ತಿದೆ. ಕನ್ನಡ, ಹಿಂದಿ ಸೇರಿ ಬೇರೆ ಬೇರೆ ಭಾಷೆಗಳಿಗೆ ಡಬ್​ ಮಾಡಿ ತೆರೆಕಾಣಿಸಲಾಗುತ್ತಿದೆ. ಏ.14ರಂದು ರಿಲೀಸ್​ ಆಗಲಿರುವ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಜೊತೆ ‘ಬೀಸ್ಟ್​’ ಪೈಪೋಟಿ ನಡೆಸಲಿದೆ. ಈ ಎರಡೂ ಸಿನಿಮಾಗಳ ಟ್ರೇಲರ್​ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿವೆ. ಆದರೆ ‘ಬೀಸ್ಟ್​’ ಸಿನಿಮಾದ ಟ್ರೇಲರ್​ ನೋಡಿದ ಬಳಿಕ ಕೆಲವು ನೆಟ್ಟಿಗರು ಒಂದಷ್ಟು ಆರೋಪ ಮಾಡಲು ಆರಂಭಿಸಿದ್ದಾರೆ. ಈ ಚಿತ್ರದ ಕಥೆಯನ್ನು ಹಾಲಿವುಡ್​ (Hollywood) ಸಿನಿಮಾವೊಂದರ ಕಥೆಯ ಜೊತೆ ಹೋಲಿಕೆ ಮಾಡಲಾಗುತ್ತಿದೆ.

ಹಲವು ವರ್ಷಗಳ ವೃತ್ತಿಜೀವನದಲ್ಲಿ ದಳಪತಿ ವಿಜಯ್​ ಅವರು ಈಗಾಗಲೇ ಅನೇಕ ಡಿಫರೆಂಟ್​ ಪಾತ್ರಗಳನ್ನು ಮಾಡಿದ್ದಾರೆ. ಈಗ ಅವರು ‘ಬೀಸ್ಟ್​’ ಚಿತ್ರದಲ್ಲಿ ಭರ್ಜರಿ ಸಾಹಸ ದೃಶ್ಯಗಳ ಮೂಲಕ ಜನರನ್ನು ರಂಜಿಸಲು ಬರುತ್ತಿದ್ದಾರೆ. ಈ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಸಿನಿಮಾದ ಟ್ರೇಲರ್ ಸದ್ದು ಮಾಡುತ್ತಿದೆ. ಆದರೆ ಟ್ರೇಲರ್​ ನೋಡಿದ ಎಲ್ಲರೂ ಹಾಲಿವುಡ್​ನ ‘ಪೌಲ್​ ಬ್ಲಾರ್ಟ್​: ಮಾಲ್​ ಕಾಪ್​’ ಸಿನಿಮಾವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಆ ಚಿತ್ರದಿಂದಲೇ ಸ್ಫೂರ್ತಿ ಪಡೆದು ‘ಬೀಸ್ಟ್’ ಸಿನಿಮಾದ ಕಥೆಗೆ ಹೆಣೆಯಲಾಗಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.

ದೊಡ್ಡ ಶಾಪಿಂಗ್​ ಮಾಲ್​ಗೆ ಭಯೋತ್ಪಾದಕರು ಎಂಟ್ರಿ ನೀಡುತ್ತಾರೆ. ಅಲ್ಲಿಗೆ ಬಂದ ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳುತ್ತಾರೆ. ಅದೇ ಮಾಲ್​ನಲ್ಲಿ ಹೀರೋ ಕೂಡ ಇರುತ್ತಾನೆ. ಆತ ಎಲ್ಲರ ರಕ್ಷಣೆಗೆ ಮುಂದಾಗುತ್ತಾನೆ. ಇದು ‘ಬೀಸ್ಟ್​’ ಟ್ರೇಲರ್​ನಲ್ಲಿ ಕಾಣಿಸಿದ ಕಥೆ. ‘ಪೌಲ್​ ಬ್ಲಾರ್ಟ್​​: ಮಾಲ್​ ಕಾಪ್​’ ಚಿತ್ರದ ಕಥೆ ಕೂಡ ಹೆಚ್ಚು-ಕಡಿಮೆ ಇದೇ ರೀತಿ ಇದೆ. ಆದರೆ ಆ ಕಥೆಯಲ್ಲಿ ಹೀರೋ ಅಲ್ಲಿಯೇ ಕೆಲಸ ಮಾಡುವ ಸೆಕ್ಯೂರಿಟಿ ಸಿಬ್ಬಂದಿ​ ಆಗಿರುತ್ತಾನೆ. ‘ಬೀಸ್ಟ್​’ ಸಿನಿಮಾದಲ್ಲಿ ಕಥಾನಾಯಕ ಓರ್ವ ಸೈನಿಕ ಆಗಿರುತ್ತಾನೆ.

ಈ ಹೋಲಿಕೆ ಬಗ್ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಪೂರ್ತಿ ಸಿನಿಮಾ ನೋಡದೆಯೇ ಈ ರೀತಿ ಹೇಳುವುದು ಸರಿಯಲ್ಲ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಆದರೆ ಈ ಯಾವ ವಿಚಾರದ ಬಗ್ಗೆಯೂ ಚಿತ್ರತಂಡದವರು ಪ್ರತಿಕ್ರಿಯೆ ನೀಡಿಲ್ಲ. ‘ಸನ್​ ಪಿಕ್ಚರ್ಸ್​’ ಮೂಲಕ ‘ಬೀಸ್ಟ್​’ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಿದೆ. ನಾಯಕಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ.

 

‘ನಾವು ತುಂಬ ಮುಂಚೆಯೇ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ವಿ. ಯಾವ ಸಿನಿಮಾ ರಿಲೀಸ್​ ಆಗುತ್ತದೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಈಗ ವಿಜಯ್​ ಅವರ ಬೀಸ್ಟ್​ ಚಿತ್ರ ಬರುತ್ತಿದೆ. ಬೀಸ್ಟ್​ ವರ್ಸಸ್​ ಕೆಜಿಎಫ್​ ಅಂತ ಕೇಳಬಾರದು. ಬೀಸ್ಟ್​ ಮತ್ತು ಕೆಜಿಎಫ್​ ಎನ್ನಬೇಕು. ಎರಡೂ ಕೂಡ ಇಂಡಿಯನ್​ ಸಿನಿಮಾ. ಇದು ಎಲೆಕ್ಷನ್​ ಅಲ್ಲ, ಸಿನಿಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನಿಮಾವನ್ನೂ ನೋಡೋಣ. ವಿಜಯ್ ಸರ್​ ನನಗಿಂತ ಸೀನಿಯರ್​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2′ ಸಿನಿಮಾ ಇಷ್ಟ ಆಗಲಿದೆ’ ಎಂದು ಯಶ್​ ಹೇಳಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ವಿಕ್ರಾಂತ್ ರೋಣ' ರಿಲೀಸ್ ಯಾವಾಗ ಗೊತ್ತಾ?

Mon Apr 4 , 2022
  ಬಹು ನಿರೀಕ್ಷಿತ ‘ವಿಕ್ರಾಂತ್ ರೋಣ’ ರಿಲೀಸ್ ಯಾವಾಗ ಗೊತ್ತಾ? 3Dಯಲ್ಲಿ ಹೇಗಿರಲಿದೆ ಕಿಚ್ಚನ ಆರ್ಭಟ? ರಿಲೀಸ್ ಆದ ‘ವಿಕ್ರಾಂತ್ ರೋಣ’ ಟೀಸರ್‌ಗೆ ಸಿನಿ ರಸಿಕರು, ಕಿಚ್ಚನ ಅಭಿಮಾನಿಗಳು, ಸಿನಿಮಾ ವಿಮರ್ಶಕರು ಮೆಚ್ಚುಗೆ ವ್ಯಕ್ತ ಪಡಿಸಿ, ಫುಲ್ ಮಾರ್ಕ್ಸ್ ನೀಡಿದ್ದಾರೆ. ಇನ್ನು 3Dಯಲ್ಲಿ ಕಿಚ್ಚನ ಅಬ್ಬರ ಹೇಗಿರಲಿದೆ ಅಂತ ನೋಡುವುದಕ್ಕೆ ಕಾಯುತ್ತಿದ್ದಾರೆ. ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಮೊದಲೇ ಘೋಷಿಸಿದಂತೆ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: