‘ಬೀಸ್ಟ್​ Vs ಕೆಜಿಎಫ್​ ಅನ್ನೋಕೆ ಇದು ಎಲೆಕ್ಷನ್​ ಅಲ್ಲ’: ದಳಪತಿ ವಿಜಯ್​ ಚಿತ್ರದ ಪೈಪೋಟಿ ಬಗ್ಗೆ ಯಶ್​ ಪ್ರತಿಕ್ರಿಯೆ

‘ವಿಜಯ್ ಸರ್​ ನನಗಿಂತ ಸೀನಿಯರ್​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2′ ಸಿನಿಮಾ ಇಷ್ಟ ಆಗಲಿದೆ’ ಎಂದು ಯಶ್​ ಹೇಳಿದ್ದಾರೆ. ಏಪ್ರಿಲ್​ನಲ್ಲಿ ಸಿನಿಪ್ರಿಯರಿಗೆ ಮನರಂಜನೆಯ ಹಬ್ಬ ಆಗಲಿದೆ.

‘ರಾಕಿಂಗ್​ ಸ್ಟಾರ್​’ ಯಶ್ (Rocking Star Yash)​ ಅಭಿನಯದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಏ.14ರಂದು ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ಹಿಂದಿ ಮತ್ತು ತೆಲುಗಿಗೂ ಡಬ್​ ಆಗಿ ಈ ಸಿನಿಮಾ ರಿಲೀಸ್​ ಆಗಲಿದೆ. ಅದೇ ರೀತಿ ಕಾಲಿವುಡ್​ ನಟ ದಳಪತಿ ವಿಜಯ್​ ಅವರ ‘ಬೀಸ್ಟ್​’ ಸಿನಿಮಾ (Beast Movie) ಕೂಡ ಅದೇ ಸಮಯದಲ್ಲಿ ತೆರೆಕಾಣುತ್ತಿದೆ. ಚಿತ್ರಕ್ಕಿಂತಲೂ ಒಂದು ದಿನ ಮುಂಚೆ ಅಂದರೆ, ಏ.13ರಂದು ‘ಬೀಸ್ಟ್​’ ಬಿಡುಗಡೆ ಆಗಲಿದೆ. ಈ ರೀತಿ ಇಬ್ಬರು ದೊಡ್ಡ ಸ್ಟಾರ್​ ನಟರ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್​ ಆದಾಗ ಸಹಜವಾಗಿಯೇ ಪೈಪೋಟಿ ಏರ್ಪಡುತ್ತದೆ. ಆದರೆ ಇದನ್ನು ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಎಂದು ಕರೆಯಲು ಯಶ್​ ಸಿದ್ಧರಿಲ್ಲ. ‘ಬೀಸ್ಟ್​ ವರ್ಸಸ್​ ಕೆಜಿಎಫ್​’ ಎಂಬ ಮಾತನ್ನೇ ಅವರು ತಳ್ಳಿ ಹಾಕಿದ್ದಾರೆ. ಅವರ ಪ್ರಕಾರ ಇದು ‘ಬೀಸ್ಟ್​ ಮತ್ತು ಕೆಜಿಎಫ್​ 2’. ‘ಬೀಸ್ಟ್​ ವರ್ಸಸ್​ ಕೆಜಿಎಫ್​ 2’ ಅಲ್ಲ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದ ಟ್ರೇಲರ್​ ಲಾಂಚ್​ ಇವೆಂಟ್​ನಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಅದ್ದೂರಿಯಾಗಿ ಭಾನುವಾರ (ಮಾ.27) ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆದ್ದರಿಂದ ಎಲ್ಲ ಭಾಷೆಯ ಪತ್ರಕರ್ತರನ್ನು ಬೆಂಗಳೂರಿಗೆ ಆಹ್ವಾನಿಸಿ ಸುದ್ದಿಗೋಷ್ಠಿ ನಡೆಸಲಾಗಿದೆ. ಈ ವೇಳೆ ‘ಬೀಸ್ಟ್​’ ಸಿನಿಮಾ ಜೊತೆಗಿನ ಕ್ಲ್ಯಾಶ್​ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಯಶ್​ ಅವರು ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ನಾವು ತುಂಬ ಮುಂಚೆಯೇ ರಿಲೀಸ್​ ಡೇಟ್​ ಅನೌನ್ಸ್​ ಮಾಡಿದ್ವಿ. ಯಾವ ಸಿನಿಮಾ ರಿಲೀಸ್​ ಆಗುತ್ತದೆ ಅನ್ನೋದು ನಮಗೆ ಗೊತ್ತಿರಲಿಲ್ಲ. ಈಗ ವಿಜಯ್​ ಅವರ ಬೀಸ್ಟ್​ ಚಿತ್ರ ಬರುತ್ತಿದೆ. ಬೀಸ್ಟ್​ ವರ್ಸಸ್​ ಕೆಜಿಎಫ್​ ಅಂತ ಕೇಳಬಾರದು. ಬೀಸ್ಟ್​ ಮತ್ತು ಕೆಜಿಎಫ್​ ಎನ್ನಬೇಕು. ಎರಡೂ ಕೂಡ ಇಂಡಿಯನ್​ ಸಿನಿಮಾ. ಇದು ಎಲೆಕ್ಷನ್​ ಅಲ್ಲ, ಸಿನಿಮಾ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾತು ಇದರಲ್ಲಿ ಬರಲ್ಲ. ಎರಡೂ ಸಿನಿಮಾವನ್ನೂ ನೋಡೋಣ. ವಿಜಯ್ ಸರ್​ ನನಗಿಂತ ಸೀನಿಯರ್​. ನಾವು ಅವರಿಗೆ ಗೌರವ ಕೊಡಬೇಕು. ವಿಜಯ್​ ಅವರ ಅಭಿಮಾನಿಗಳಿಗೂ ‘ಕೆಜಿಎಫ್​ 2′ ಸಿನಿಮಾ ಇಷ್ಟ ಆಗಲಿದೆ’ ಎಂದು ಯಶ್​ ಹೇಳಿದ್ದಾರೆ.

‘ಕೆಜಿಎಫ್​ 2’ ರೀತಿಯೇ ‘ಬೀಸ್ಟ್​’ ಕೂಡ ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆ ಕಾಣುತ್ತಿದೆ. ಈ ಚಿತ್ರಕ್ಕೆ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ವಿಜಯ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. ಈಗಾಗಲೇ ಹಾಡುಗಳು ಸೂಪರ್​ ಹಿಟ್​ ಆಗಿವೆ. ಆ ಕಾರಣದಿಂದ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಹಾಗೆಯೇ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಕೂಡ ಸಖತ್​ ಹೈಪ್​ ಸೃಷ್ಟಿ ಮಾಡಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಬಾಲಿವುಡ್​ ಕಲಾವಿದರಾದ ರವೀನಾ ಟಂಡನ್​ ಮತ್ತು ಸಂಜಯ್​ ದತ್​ ಅವರು ನಟಿಸಿರುವುದರಿಂದ ಉತ್ತರ ಭಾರತದ ಪ್ರೇಕ್ಷಕರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಇವರಿಬ್ಬರ ಪಾತ್ರಗಳು ಅಬ್ಬರಿಸಿವೆ. ರಮಿಕಾ ಸೇನ್​ ಎಂಬ ಪಾತ್ರದಲ್ಲಿ ರವೀನಾ ಟಂಡನ್​ ಕಾಣಿಸಿಕೊಂಡಿದ್ದರೆ, ಅಧೀರ ಎಂಬ ಪಾತ್ರಕ್ಕೆ ಸಂಜಯ್​ ದತ್​ ಬಣ್ಣ ಹಚ್ಚಿದ್ದಾರೆ. ಇವರಿಬ್ಬರು ಕೂಡ ಟ್ರೇಲರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

 

Leave a Reply

Your email address will not be published. Required fields are marked *

Next Post

ಆಮೀರ್ ಖಾನ್ ಅಭಿಮಾನಿಗಳಿಗೆ ಬಿಗ್ ಶಾಕ್..!

Mon Mar 28 , 2022
ಬಾಲಿವುಡ್ ನ ನಟ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ? ಈ ಸುದ್ದಿ ಕೇಳಿ ಆಮೀರ್ ಖಾನ್ ಅಭಿಮಾನಿಗಳು ಶಾಕ್ ಒಳಗಾಗಿದ್ದಾರೆ. ನೀವು ಇನ್ನೂ ಸಿನಿಮಾಗಳನ್ನು ಮಾಡಬೇಕು, ನಿಮ್ಮ ನಟನೆಯನ್ನು ಇನ್ನಷ್ಟು ನೋಡಬೇಕು, ಚಿತ್ರರಂಗದಲ್ಲಿ ಇನ್ನೂ ಬಹಳ ವರ್ಷ ನೀವು ಇರಬೇಕು ಅಂತ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಹಾಗಿದ್ರೆ ಆಮೀರ್ ಖಾನ್ ನಿಜಕ್ಕೂ ಚಿತ್ರರಂಗ ತೊರೆಯುವುದಕ್ಕೆ ನಿರ್ಧಾರ ಮಾಡಿದ್ದಾರಾ? ಅವರಿಗೆ ಅಂಥದ್ದು ಏನಾಯ್ತು? ಆಮೀರ್ ಖಾನ್ ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ. ಕೆಲವೇ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: