ಬೆಲೆಯೇರಿಕೆ ಬಗ್ಗೆ ಪ್ರತಿಭಟಿಸಲು ಕಾಂಗ್ರೆಸ್ ಗೆ ನೈತಿಕ ಹಕ್ಕಿಲ್ಲ – ಸಿಎಂ ಬಸವರಾಜ ಬೊಮ್ಮಾಯಿ

ಬೆಳೆಯೇರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಗೆ ( Congress Party ) ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ. ದೇಶದಲ್ಲಿ ಅತಿಹೆಚ್ವು ಬೆಳೆಯೇರಿಕೆ ಮಾಡಿದ ಖ್ಯಾತಿ, ಕೀರ್ತಿ, ದಾಖಲೆ ಕಾಂಗ್ರೆಸ್ ನದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದರು.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿ.ಎಫ್. ಐ. ವಿದ್ಯಾರ್ಥಿಗಳ ಪ್ರತಿಭಟನೆ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಚಿಸಿರುವ ಸಮಿತಿ ಪರಾಮರ್ಶೆ ಮಾಡುತ್ತಿದ್ದು ವರದಿ ಬಂದ ಕೂಡಲೇ ತೀರ್ಮಾನ ಮಾಡಲಾಗುವುದು ಎಂದರು.

ಮುಸ್ಕಾನ್ ಅವರಿಗೆ ಅಲ್ ಖೈದಾ ಮುಖ್ಯಸ್ಥರು ನೀಡಿರುವ ಬೆಂಬಲಕ್ಕೆ ಸಂಬಂಧಿಸಿದಂತೆ ಅನಂತ ಕುಮಾರ್ ಹೆಗಡೆ ಅವರು ಪತ್ರ ಬರೆದಿದ್ದಾರೆ. ಈ ಬಗ್ಗೆ ತನಿಖೆಯಾಗಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಏನಿದೆ ಎಂದು ಗೊತ್ತಿಲ್ಲ. ಅನಂತಕುಮಾರ್ ಹೆಗಡೆ ಅವರ ಬಳಿ ಚರ್ಚೆ ಮಾಡಿ ಅವರ ಬಳಿ ಇರುವ ಮಾಹಿತಿ ಬಗ್ಗೆ ತಿಳಿದುಕೊಳ್ಳಲಾಗುವುದು.ಅದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುತ್ತಿದ್ದಾರೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಅವರ ಸಹೋದರಿಯ ಮಗಳ ಮದುವೆಗೆ ಆಹ್ವಾನಿಸಲು ಬಂದಿದ್ದರು. ಕೆಲವು ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು ಎಂದರು.

ಇಂದು ಉಡುಪಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ನಾಳೆ ಮಂಗಳೂರಿನಲ್ಲಿ ಪಕ್ಷದ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸುತ್ತೇದ್ದೇನೆ ಎಂದರು.

Leave a Reply

Your email address will not be published. Required fields are marked *

Next Post

ಅಪ್ಪು ನಿವಾಸಕ್ಕೆ ಟಾಲಿವುಡ್ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ ಹಾಗೂ ಅಲಿ ಭೇಟಿ

Mon Apr 11 , 2022
ಸದಾಶಿವ ನಗರದಲ್ಲಿರುವ ಅಪ್ಪು ಮನೆಗೆ ಟಾಲಿವುಡ್ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ ಹಾಗೂ ಅಲಿ ಭೇಟಿ ನೀಡಿ ರಾಜ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಪ್ಪು ಭಾವಚಿತ್ರಕ್ಕೆ ನಮನ ಸಲ್ಲಿಸಿದ ಅವರು, ಈ ವೇಳೆ ಅಪ್ಪು ಜೊತೆಗೆ ಕಳೆದ ದಿನಗಳನ್ನು ಬ್ರಹ್ಮಾನಂದಂ ಅಪ್ಪು ಕುಟುಂಬದೊಂದಿಗೆ ಸ್ಮರಿಸಿಕೊಂಡಿದ್ದಾರೆ. ಬಳಿಕ ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಅವರಿಗೆ ಬ್ರಹ್ಮಾನಂದಂ ಹಾಗೂ ಅಲಿ ಸಾಂತ್ವಾನದ ಮಾತುಗಳನ್ನ ಹೇಳಿದ್ದಾರೆ. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್‍ಕುಮಾರ್, ರಾಮ್ ಕುಮಾರ್ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: