ಬೆಂಗಳೂರು: ಇಬ್ಬರು ಸಿಂಡಿಕೇಟ್ ಸದಸ್ಯರನ್ನು ತೆಗೆದು ಹಾಕಿರುವ ಸರ್ಕಾರದ ನಿರ್ಧಾರದ ವಿರುದ್ಧ ಬೆಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಉಪಕುಲಪತಿ ವಿರುದ್ಧ ರಾಜೀನಾಮೆ ನೀಡಿರುವ ಸದಸ್ಯರು ಗಂಭೀರ ಆರೋಪವನ್ನು ಮಾಡಿದ್ದಾರೆ. ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಇಬ್ಬರು ಸದಸ್ಯರನ್ನು ಬೆಂಗಳೂರು ವಿವಿ ಉಪ ಕುಲಪತಿಗಳಾದ ಕೆ.ಆರ್ . ವೇಣುಗೋಪಾಲ್ ರವರು ತೆಗೆದು ಹಾಕಿದ್ದಾರೆ. ವಿವಿಯ ಆರ್ಥಿಕ ಹಾಗೂ ಕೆಲಸಗಳ ಸಮಿತಿಯಿಂದ ಇಬ್ಬರು ಸದಸ್ಯರನ್ನು ಯಾವುದೇ ಕಾರಣವಿಲ್ಲದೇ ತೆಗೆದು ಹಾಕಿದ್ದಾರೆ ಎಂದು ಆರೋಪಿಸಿ. ಈ ಸದಸ್ಯರ ಆರೋಪಕ್ಕೆ ಇತರರು ಬೆಂಬಲ ಸೂಚಿಸಿದ್ದಾರೆ. ಉಪಕುಲಪತಿಗಳು ನಡೆಸಿರುವ ಅಕ್ರಮಗಳ ಬಗ್ಗೆ ಸಿಂಡಿಕೇಟ್ ಸದಸ್ಯರು ಸಾರ್ವಜನಿಕಗೊಳಿಸಿದ್ದಾರೆ. ವಿವಿಯಲ್ಲಿ ಪ್ರಗತಿ ಕೆಲಸಗಳಿಗೆ ವಿ.ಸಿ ತಡೆಯುತ್ತಿದ್ದಾರೆ. ನಿಯಮದ ಪ್ರಕಾರ ಪ್ರೊ.ವೇಣುಗೋಪಾಲ್ ನಡೆದುಕೊಳ್ಳುತ್ತಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada