ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅದೇಷ್ಟೋ ಇಂಟ್ರಸ್ಟಿಂಗ್ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಅಂತದ್ದೇ ಇಲ್ಲೊಂದು ವಿಡಿಯೋದಲ್ಲಿ ಹಾವೊಂದು ಕೂಲ್ ಡ್ರಿಂಕ್ ಟಿನ್ನೊಳಗೆ ತನ್ನ ತಲೆ ತೂರಿಸಿ, ಅದರಿಂದ ಮುಕ್ತಿ ಪಡೆಯಲು ಹರಸಾಹಸ ಪಡುತ್ತಿರುವ ದೃಶ್ಯ ವೈರಲ್ ಆಗಿದೆ.
ಇಲ್ಲಿ ಹಾವೊಂದು ಬೇಸಿಗೆಯ ದಣಿವು ನೀಗಿಸಿಕೊಳ್ಳಲು ನೀರು ಕುಡಿಯುವ ಸಲುವಾಗಿ ಕೂಲ್ ಡ್ರಿಂಕ್ ಟಿನ್ನೊಳಗೆ ತನ್ನ ತಲೆ ಹಾಕಿದೆ. ನಂತರ ಇದರಿಂದ ಹೊರ ಬರಲು ಸಾಧ್ಯವಾಗದೇ ನರಳಾಡುತ್ತಿರುವ ದೃಶ್ಯವನ್ನು ನೀವು ಈ ವಿಡಿಯೋದಲ್ಲಿ ನೋಡಬಹುದು.
ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ತಂಪು ಪಾನೀಯಗಳ ಟ್ರೆಂಡ್ ಹೆಚ್ಚಾಗುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಯುವಕರು ಅಲ್ಯೂಮಿನಿಯಂ ಡಬ್ಬಿಗಳಲ್ಲಿ ಕುಡಿಯಲು ಇಷ್ಟಪಡುತ್ತಾರೆ. ಕುಡಿದ ನಂತರ ಅದನ್ನು ಕಸದ ಬುಟ್ಟಿಗೆ ಹಾಕುವ ಬದಲು ಎಲ್ಲಿ ಬೇಕಂದರಲ್ಲಿ ಬಿಸಾಡುತ್ತಾರೆ. ಜನರ ಈ ಅಸಡ್ಡೆ ಕೃತ್ಯ ಪ್ರಾಣಿಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada