ಬೇಸಿಗೆ ಕಾಲದಲ್ಲಿ ವಾತಾವರಣ ತುಂಬಾ ಬಿಸಿಯಾಗಿರುವ ಕಾರಣ ಹೊರಗಡೆ ಹೋಗಿ ಬಂದಾಗ ತುಂಬಾ ಸುಸ್ತಾಗುತ್ತದೆ ಮತ್ತು ಬಾಯಾರಿಕೆಯಾಗುತ್ತದೆ. ಆಗ ಕೆಲವರು ನೀರನ್ನು ಕುಡಿಯುತ್ತಾರೆ. ಆದರೆ ನೀರಿನಿಂದ ನಿಮ್ಮ ಬಾಯಾರಿಕೆ ನೀಗದಿದ್ದರೆ ಕೂಲ್ ಡ್ರಿಂಕ್ ಗಳನ್ನು ಕುಡಿಯುವ ಬದಲು ಈ ಆರೋಗ್ಯಕರ ಪಾನೀಯಗಳನ್ನು ಕುಡಿಯಿರಿ.
ಮಜ್ಜಿಗೆ : ಬೇಸಿಗೆಯಲ್ಲಿ ಬಾಯಾರಿಕೆ ಆಗುತ್ತಿದ್ದರೆ ಮಜ್ಜಿಗೆ ಸೇವಿಸಿ. ಇದರಲ್ಲಿ ವಿಟಮಿನ್ ಎ, ಬಿ, ಸಿ, ಇ ಮತ್ತು ಕೆ ಮುಂತಾದ ಪೋಷಕಾಂಶವಿರುತ್ತದೆ. ಇದು ಶಾಖವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹವನ್ನು ಹೈಡ್ರೇಟ್ ಮಾಡುತ್ತದೆ.
ಎಳನೀರು : ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ವಿಟಮಿನ್ ಗಳು ಮತ್ತು ಖನಿಜಗಳು ಸಮೃದ್ಧವಾಗಿದೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದು ನಿರ್ಜಲೀಕರಣ ಸಮಸ್ಯೆಯನ್ನು ನಿವಾರಿಸುತ್ತದೆ.
ನಿಂಬೆ ಪಾನಕ : ಬೇಸಿಗೆಯಲ್ಲಿ ನಿಂಬೆ ಪಾನಕ ಸೇವಿಸಿದರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಕಾಯಿಲೆ ಬೀಳುವುದನ್ನು ತಡೆಯಬಹುದು. ಮತ್ತು ಇದು ದೇಹವನ್ನು ತಂಪಾಗಿಡುತ್ತದೆ.
ಹಣ್ಣಿನ ರಸ : ಹಣ್ಣಿನ ರಸ ದೇಹವನ್ನು ಉತ್ತಮವಾಗಿಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada