ಇಂದು, ನಾಳೆ ಭಾರತ್ ಬಂದ್ ಗೆ ಕರೆ

ಕಾರ್ಮಿಕ, ರೈತ ವಿರೋಧಿ, ಜನವಿರೋಧಿ ಮತ್ತು ರಾಷ್ಟ್ರವಿರೋಧಿ ನೀತಿಗಳ ವಿರುದ್ಧ ಒಕ್ಕೂಟಗಳು ಎರಡು ದಿನಗಳ ಅಖಿಲ ಭಾರತ ಮುಷ್ಕರವನ್ನು ಘೋಷಿಸಿವೆ. ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಖಾಸಗೀಕರಣ ಗೊಳಿಸುವ ಸರ್ಕಾರದ ಯೋಜನೆ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ. ಇಂದು ಮತ್ತು ನಾಳೆ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು. ರೈಲ್ವೇ ಮತ್ತು ರಕ್ಷಣಾ ವಲಯದ ಒಕ್ಕೂಟಗಳು ಕೂಡ ಮುಷ್ಕರವನ್ನು ಬೆಂಬಲಿಸಿವೆ. ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ ಮತ್ತು ವಿಮೆಯಂತಹ ವಿವಿಧ ಕ್ಷೇತ್ರಗಳ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವುದರಿಂದ ಅನೇಕ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಮುಷ್ಕರದಿಂದ ಬ್ಯಾಂಕ್ನಲ್ಲಿ ಕೆಲಸವು ಸೀಮಿತ ಪ್ರಮಾಣದಲ್ಲಿರಲಿದ್ದು, ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಉಳಿದಂತೆ ಮುಷ್ಕರದ ನಡುವೆ ಎಂದಿನಂತೆ ಕಚೇರಿ ಕೆಲಸಗಳು ನಡೆಯಲಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

"ಮಾಯಾಮೃಗ" ದ ಬೆನ್ನೇರಿ ಹೊರಟ ಯತಿರಾಜ್.

Mon Mar 28 , 2022
  ರಾಮಾಯಣದ ಮಾಯಮೃಗ ಪ್ರಸಂಗ ಎಲ್ಲರಿಗೂ ಗೊತ್ತು. ತನ್ನ ಗಂಡನಿಗಾಗಿ ಅಷ್ಟು ವೈಭೋಗಗಳನ್ನು ತ್ಯಾಗ ಮಾಡಿ ಬಂದ ಮಹಾ ಪತಿವ್ರತೆ ಸೀತಾದೇವಿ. ಕಾಡಿನಲ್ಲಿ “ಮಾಯಾಮೃಗ”ಕ್ಕೆ ಆಸೆಪಟ್ಟಿದ್ದು, ಅದನ್ನು ಬೆನ್ನಟ್ಟಿ  ರಾಮ ಹೋಗಿದ್ದು, ಇದರಲ್ಲಿ ಏನೋ ಇದೆ ಎಂದು ಲಕ್ಷ್ಮಣ ಹೇಳಿದ್ದು.ಕೊನೆಗೆ ಅದು ಮಾರೀಚ ಎಂದು ತಿಳಿದ್ದಿದ್ದು, ಈ ವಿಷಯವನ್ನು ಈಗಿನ ಸಂದರ್ಭಕ್ಕೆ ತಕ್ಕ ಹಾಗೆ ಹೊಂದುವಂತೆ ಕಥೆ ಸಿದ್ದ ಮಾಡಿಕೊಂಡಿದ್ದೀನಿ. ಈ ಹಿಂದೆ ಕನ್ನಡ ಸೇರಿದಂತೆ ಇತರ ಭಾಗಗಳಲ್ಲಿ ತೀರ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: