ಚೀನಾ ಸೇರಿದಂತೆ ಅಲವು ದೇಶಗಳಲ್ಲಿ ಮತ್ತೆ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿದ್ದು, ಇದು ಜನರಲ್ಲಿ ಆತಂಕ ಮೂಡಿಸಿದೆ. ಯುರೋಪ್ ಮತ್ತು ಆಗ್ನೇಯ ಏಷ್ಯಾದಲ್ಲಿ ಕೊರೊನಾ ಮತ್ತೆ ಕಾಣಿಸಿಕೊಂಡಿದ್ದು, ತಜ್ಞರು ಭಾರತಕ್ಕೂ ನಾಲ್ಕನೇ ಅಲೆ ಅಪ್ಪಳಿಸಬಹುದೆಂದು ಕಳವಳ ವ್ಯಕ್ತಪಡಿಸಿದ್ದಾರೆ.ಚೀನಾದಲ್ಲಿ 14 ತಿಂಗಳು ಗಳ ನಂತರ ಕೋವಿಡ್ ಗೆ ಇಬ್ಬರು ಬಲಿಯಾಗಿದ್ದು, ಹಾಂಗ್ ಕಾಂಗ್ನಲ್ಲಿ ಈವರೆಗೆ 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಸುಮಾರು 5401 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಚೀನಾದಲ್ಲಿ ಬಲಿಯಾದವರಿಗಿಂತಲೂ ಹೆಚ್ಚು.ಯುರೋಪ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಇಟಲಿಯಲ್ಲಿ ಒಂದೇ ವಾರದಲ್ಲಿ ಕೊರೊನಾ ಪ್ರಕರಣಗಳಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ. ಚೀನಾದ ಬಳಿಕ ಅತಿ ಹೆಚ್ಚು ಆತಂಕಕ್ಕೆ ಕಾರಣವಾಗಿರೋ ದೇಶವೆಂದ್ರೆ ದಕ್ಷಿಣ ಕೊರಿಯಾ. ಇಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 90 ಲಕ್ಷ ದಾಟಿದೆ. ಗುರುವಾರ ಮತ್ತು ಶನಿವಾರದ ವರೆಗೆ 14 ಲಕ್ಷ ಸೋಂಕಿತರು ಪತ್ತೆಯಾಗಿದ್ದು, ಕಳೆದ ವಾರಕ್ಕೆ ಹೋಲಿಸಿದ್ರೆ ಜಗತ್ತಿನಾದ್ಯಂತ ಒಟ್ಟಾರೆ ಕೇಸ್ ಗಳಲ್ಲೂ ಶೇ.12 ರಷ್ಟು ಏರಿಕೆಯಾಗಿರೋದು ನಿಜಕ್ಕೂ ಆಪಾಯಕಾರಿ ಮತ್ತು ಆತಂಕಕಾರಿ. ಕೊರೋನಾ ಕೇಸ್ ಗಳ ಹೆಚ್ಚಳದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದೆ. ಈ ರೋಗವು ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ, ನಿರ್ಲಕ್ಷ್ಯ ಮತ್ತು ತಪ್ಪು ಮಾಹಿತಿಯೇ ಪ್ರಕರಣಗಳು ಮತ್ತೆ ಹೆಚ್ಚಾಗಲು ಬಹುಮುಖ್ಯ ಕಾರಣವೆಂದು WHO ಹೇಳಿದೆ.ಕೊರೊನಾ ಲಸಿಕೆ ಡೋಸ್ ಪಡೆಯದೇ ಇರುವುದು ಬಹಳ ಅಪಾಯಕಾರಿ. ಆದರೆ ಅಲವರು ಜನ ಈಗಾಗಲ್ಲೆ ಡೋಸ್ ಪಡೆದಿರುವುದರಿಂದ ಅಷ್ಟೇನೂ ಅಪಾಯವಿಲ್ಲ. ಆದರೂ ಸಹ ಕೋವಿಡ್ ನಿಯಮಗಳನ್ನ ಪಾಲಿಸಿಕೊಂಡು ಜಾಗೃತೆಯಿಂದ ಇರೋದು ಬಹು ಮುಖ್ಯವಾಗಿದೆ.
Next Post
ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ್ದ ಇಬ್ಬರು ಅರೆಸ್ಟ್...!
Sun Mar 20 , 2022
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಮಾರ್ಚ್ 15 ರಂದು ಹಿಜಾಬ್ ಪ್ರಕರಣದ ತೀರ್ಪು ನೀಡಿದರು.ಈ ಕಾರಣಕ್ಕೆ ತಮಿಳುನಾಡಿನ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಿದ್ದರು.ತಿರುನೆಲ್ವೇಲಿಯಿಂದ ಕೋವೈ ರಹಮತುಲ್ಲಾ ಮತ್ತು ತಂಜಾವೂರಿನ ಎಸ್ ಜಮಾಲ್ ಮೊಹಮ್ಮದ್ ಉಸ್ಮಾನಿ ಅವರನ್ನು ಶನಿವಾರ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳು ಇಸ್ಲಾಮಿಕ್ ಧಾರ್ಮಿಕ ಸಂಘಟನೆಯಾದ ತಮಿಳುನಾಡು ತೌಹೀದ್ ಜಮಾತ್ ನ ಸದಸ್ಯರು ಎಂದು ತಿಳಿದು ಬಂದಿದೆ.ತೌಹೀದ್ ಜಮಾತ್ ಸಂಘಟನೆಯ ನಾಯಕ ಕೊವಾಯಿ ಆರ್ ರೆಹಮತುಲ್ಲಾ, ಈ ಸಂಬಂಧ ತಮಿಳುನಾಡು ಮಧುರೆಯ ಪ್ರತಿಭಟನೆಯಲ್ಲಿ […]

You May Like
-
11 months ago
ಪಠ್ಯ ಪುಸ್ತಕದಲ್ಲಿ ಪುನೀತ್ ರಾಜ್ ಕುಮಾರ್………
-
11 months ago
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್
-
10 months ago
ಡ್ರಗ್ಸ್ ಇನ್ ಬಿಗ್ ಬಾಸ್..