ಮೊನ್ನೆತಡರಾತ್ರಿ ಡ್ರಗ್ಸ್ ಪಾರ್ಟಿ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ.
ಇದರಲ್ಲಿ ಖ್ಯಾತ ಗಾಯಕ ಹಾಗೂ ಬಿಗ್ ಬಾಸ್ ವಿನ್ನರ್ ಒಬ್ಬರು ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಸಿನಿಮಾ ರಂಗಕ್ಕೂ ಡ್ರಗ್ಸ್ಗೂ ಅವಿನಾಭಾವ ಸಂಬಂಧ. ಹಿಂದಿ, ತೆಲುಗು, ತನ್ನಡ, ತಮಿಳು, ಮಲಯಾಳಂ ಸೇರಿದಂತೆ ಭಾರತದ ವಿವಿಧ ಚಿತ್ರರಂಗದಲ್ಲಿ ಡ್ರಗ್ಸ್ ಪಾರ್ಟಿ ಡ್ರಗ್ಸ್ ಕೇಸ್ಗಳು) ಆಗಾಗ ಸುದ್ದಿ ಮಾಡುತ್ತವೇ ಇರುತ್ತವೆ. ಇದೀಗ ಹೈದರಾಬಾದ್ನಲ್ಲಿ ಸೆಲಿಬ್ರಿಟಿಗಳ ಡ್ರಗ್ಸ್ ಪಾರ್ಟಿಯೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ನಿನ್ನೆ ತಡರಾತ್ರಿ ಡ್ರಗ್ಸ್ ಪಾರ್ಟಿ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಇದರಲ್ಲಿ ಖ್ಯಾತ ಗಾಯಕ ಹಾಗೂ ತೆಲುಗು ಬಿಗ್ ಬಾಸ್ ವಿನ್ನರ್ ಒಬ್ಬರು ಸಿಕ್ಕಿ ಹಾಕಿಕೊಂಡಿದ್ದಾರೆ ಸಿನಿ ತಾರೆಯರ ಡ್ರಗ್ಸ್ ಪಾರ್ಟಿಯೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಎನ್ನಲಾಗಿದೆ. ಇದೇ ಕೇಸ್ಗೆ ಸಂಬಂಧಿಸಿದಂತೆ ಬಿಗ್ ಬಾಸ್ ವಿನ್ನರ್ ಸೇರಿದಂತೆ ಒಟ್ಟು 130 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಜಾರಾ ಹಿಲ್ಸ್ನಲ್ಲಿ ನಡೀತಿತ್ತು ಡ್ರಗ್ಸ್ ಪಾರ್ಟಿತೆಲಂಗಾಣದ ಹೈದ್ರಾಬಾದ್ನ ಬಂಜಾರಾ ಹಿಲ್ಸ್ ಅತ್ಯಂತ ಶ್ರೀಮಂತ ಜನವಸತಿ ತಾಣ. ಅಲ್ಲಿ ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು ಹೀಗೆ ಗಣ್ಯ ವ್ಯಕ್ತಿಗಳೇ ಹೆಚ್ಚಾಗಿ ವಾಸಿಸುತ್ತಾರೆ. ಇಂತಹ ಪ್ರದೇಶದಲ್ಲಿ ಮೋಜು ಮಸ್ತಿಗೂ ಏನೂ ಕಡಿಮೆ ಇಲ್ಲ. ಇದೇ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಿನ್ನೆ ಡ್ರಗ್ಸ್ ಪಾರ್ಟಿಯೊಂದು ಅರೆಂಜ್ ಆಗಿತ್ತು.ದಾಳಿ ವೇಳೆ ಪತ್ತೆಯಾಯ್ತು ಮಾದಕ ವಸ್ತುಗಳುಬಂಜಾರಾ ಹಿಲ್ಸ್ನ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ನಲ್ಲಿರುವ ಪುಡ್ಡಿಂಗ್ ಮತ್ತು ಮಿಂಕ್ ಪಬ್ ಮೇಲೆ ದಾಳಿ ನಡೆಸಲಾಗಿದ್ದು, ಸಮಯ ಮೀರಿ ಪಬ್ ತೆರೆದಿದ್ದಕ್ಕಾಗಿ ದೂರು ದಾಖಲಿಸಿಕೊಳ್ಳಲಾಗಿದೆ. ದಾಳಿ ವೇಳೆ ಪಬ್ನಲ್ಲಿ ಕೊಕೇನ್, ಗಾಂಜಾ ಮತ್ತು ಐಎಸ್ಡಿಯನ್ನು ಪತ್ತೆ ಆಗಿದೆ ಎನ್ನಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada