ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುವ ಮುನ್ನ ಈ ಸುದ್ದಿ ನೋಡಿ!

ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್​ಗಳು ಹೊತ್ತಿ ಉರಿಯುತ್ತಿರುವ ಘಟನೆಗಳು ಸಾಕಷ್ಟು ನಡೆಯುತ್ತಿವೆ. ಮೂರು ತಿಂಗಳಲ್ಲಿ ಮೂರು ಬಸ್‌ಗಳು ಸುಟ್ಟು ಹೋಗಿವೆ. ನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುವ ಈ ಬಸ್‌ಗಳು ಎಷ್ಟು ಸುರಕ್ಷಿತ ಎಂಬ ಅನುಮಾನ ಮೂಡಿದೆ.

ಅಶೋಕ್ ಲೇಲ್ಯಾಂಡ್ ಕಂಪನಿಯಲ್ಲಿ ಬಸ್​ಗಳ ವಿನ್ಯಾಸದಲ್ಲಿ ಲೋಪದೋಷಗಳಿವೆ.

ನಗರದ 48 ಡಿಪೋಗಳಲ್ಲಿ ಬಸ್ ನಿರ್ವಹಣೆಯಲ್ಲಿಯೂ ವೈಫಲ್ಯವಾಗಿದೆ. ಬಸ್ ಡಿಪೋಗಳಿಂದ ಹೊರಬರುವ ಮುನ್ನ ಸರಿಯಾದ ಪರಿಶೀಲನೆ ನಡೆಸುತ್ತಿಲ್ಲ. ಕಳಪೆ ಗುಣಮಟ್ಟದ ಸ್ಪೇರ್ ಪಾರ್ಟ್ಸ್ ಖರೀದಿಸಲಾಗುತ್ತಿದೆ.

ಬಿಸಿಲಿನ ಧಗೆಯಿಂದ ಇಂಜಿನ್​ನಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮೂರು ತಿಂಗಳ ಅಂತರದಲ್ಲೇ 3 ಬಿಎಂಟಿಸಿ ಬಸ್​ಗಳು ಸುಟ್ಟು ಹೋಗಿವೆ. ಶಾರ್ಟ್ ಸರ್ಕ್ಯೂಟ್​ನಿಂದ ಸಾಕಷ್ಟು ಬಾರಿ ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತಿರುವ ಸಾರಿಗೆ ನೌಕರರು ನಿಗಮದ ನಿರ್ಲಕ್ಷ್ಯದ ವಿರುದ್ಧ ಬೇಸರ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

Next Post

ಪತಿ ಹುಟ್ಟುಹಬ್ಬಕ್ಕೆ ಮನೆಯಲ್ಲಿ ಹೊಸ ಅತಿಥಿ ಆಗಮನವೆಂದ ನಟಿ ಪ್ರಣೀತಾ ಸುಭಾಷ್​

Mon Apr 11 , 2022
ಸ್ಯಾಂಡಲ್​ವುಡ್​ ನಟಿ ಪ್ರಣೀತಾ ಸುಭಾಷ್​​ ಗುಟ್ಟು ಗುಟ್ಟಾಗಿ ಮದುವೆ ಆಗಿದ್ದು ಎಲ್ಲರಿಗೂ ತಿಳಿದಿದೆ. ಬೆಂಗಳೂರು ಮೂಲದ ಉದ್ಯಮಿಯ ಜೊತೆಯಲ್ಲಿ ಅತ್ಯಂತ ಸರಳವಾಗಿ ವಿವಾಹವಾಗಿದ್ದ ನಟಿ ಪ್ರಣೀತಾ ಇದೀಗ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ. ತಮ್ಮ ಪತಿಯ 34ನೇ ಜನ್ಮ ದಿನಕ್ಕೆ ಮನೆಗೆ ಏಂಜಲ್ಸ್​ಗಳ ಆಗಮನವಾಗಲಿದೆ ಎಂದು ನಟಿ ಪ್ರಣೀತಾ ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಫೋಟೋ ಶೂಟ್​ ಮಾಡಿಸಿಕೊಳ್ಳುವ ಮೂಲಕ ತಾವು ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ ನಟಿ ಪ್ರಣೀತಾ ಸುಭಾಷ್​. […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: