ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅಭಿನಯದ, ನೈಜ ಘಟನೆ ಆಧಾರಿತ ಹಿಂದಿಯ ದಸ್ವಿ ಚಲನಚಿತ್ರ ಬಿಡುಗಡೆ ದಿನಾಂಕ ನಿಗದಿಯಾಗಿದೆ.
ಅಭಿಷೇಕ್ ಬಚ್ಚನ್ ಮತ್ತು ಯಾಮಿ ಗೌತಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಏಪ್ರಿಲ್ 7 ರಂದು ನೆಟ್ ಫ್ಲಿಕ್ಸ್ ಮತ್ತು ಜಿಯೋ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಅವರ ಜೀವನದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ. ಹರಿಯಾಣದಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಓಂ ಪ್ರಕಾಶ್ ಚೌಟಾಲ ಜೈಲಲ್ಲಿದ್ದುಕೊಂಡು ತಮ್ಮ 80ನೇ ವಯಸ್ಸಲ್ಲಿ 10ನೇ ತರಗತಿ ಪಾಸ್ ಮಾಡಿದ್ದರು. ಈ ಪ್ರಕರಣ ಆಧಾರಿತ ಚಿತ್ರವೇ ದಸ್ವಿ ಚಿತ್ರ.
ಚೌಟಾಲ ಆಗಿ ಅಭಿಷೇಕ್ ಬಚ್ಚನ್, ಐಪಿಎಸ್ ಪಾತ್ರದಲ್ಲಿ ಯಾಮಿ ಗೌತಮ್ ಸೇರಿದಂತೆ ನಿಮ್ರತ್ ಕೌರ್ ಪ್ರಮುಖ ಪಾತ್ರದಲ್ಲಿದ್ದಾರೆ. ರಿತನ್ ಶಾ ಚಿತ್ರಕಥೆ ಬರೆದಿದ್ದು ತುಶಾರ್ ಜಲೋಟ ಮೊದಲಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ.
ಚಿತ್ರತಂಡ ಬುಧವಾರ ಟ್ರೇಲರ್ ಬಿಡುಗಡೆ ಮಾಡಿದ್ದು, ಸಾಮಾಜಿಕ ಹಾಸ್ಯ ಚಿತ್ರ ‘ದಸ್ವಿ’ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada