ನಟಿ ರಾಧಿಕಾ ಪಂಡಿತ್ ಎದೆಹಾಲಿನ ಮಹತ್ವ, ಎದೆಹಾಲು ದಾನದ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಾಗಿದ್ದಾರೆ. ಅಮ್ಮನ ಎದೆ ಹಾಲು ಮಗುವಿಗೆ ಅಮೃತಕ್ಕೆ ಸಮ. ಮಗುವಿಗೆ ಹಾಲು ನೀಡುವುದ್ದರಿಂದ ತಾಯಿ ಮಗುವಿನ ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯ. ಪ್ರತಿವರ್ಷ ವಿಶ್ವದಾದ್ಯಂತ 8 ಲಕ್ಷ ಜೀವ ಉಳಿಸಲು ಸಾಧ್ಯವಾಗುತ್ತಿದೆ. ಅದರಲ್ಲೂ 6 ತಿಂಗಳಿಗಿಂತ ಚಿಕ್ಕ ಮಕ್ಕಳಿಗೆ ಪೋಷಕಾಂಶದ ಕೊರತೆ ಉಂಟಾಗದಿರಲು ಹಾಗೂ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತನಪಾನ ಅವಶ್ಯಕ. ಸ್ತನಪಾನದ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1990ರಿಂದ ಪ್ರತಿವರ್ಷ ಆಗಸ್ಟ್ 1ರಿಂದ 7ರವರೆಗೆ ‘ಬ್ರೆಸ್ಟ್ ಫೀಡಿಂಗ್ ವೀಕ್’ ಎಂದು ಆಚರಿಸಲಾಗುವುದು. ಇಷ್ಟಾದರೂ ಎದೆಹಾಲಿನ ಬಗೆಗಿನ ಅಜ್ಞಾನ ನಿಂತಿಲ್ಲ, ಎದೆಹಾಲಿನ ಕೊರತೆ ತಪ್ಪಿಲ್ಲ. ಹೀಗಾಗಿ ಎದೆಹಾಲಿನ ಮಹತ್ವ, ಎದೆಹಾಲು ದಾನದ ಬಗ್ಗೆ ತಿಳುವಳಿಕೆ ಮೂಡಿಸಲು, ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಮುಂದಾಗಿದ್ದಾರೆ.
ಎದೆ ಹಾಲು ದಾನದ ಬಗ್ಗೆ ಅರಿವು ಮುಡಿಸುವ ವಿಡಿಯೋದಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿರುವುದು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಬರೆದುಕೊಂಡಿದ್ದಾರೆ.
2016ರಲ್ಲಿ ಎದೆಹಾಲಿನ ಬ್ಯಾಂಕ್ ಸ್ಥಾಪನೆ
ಜುಲೈ 13, 2016ರಲ್ಲಿ ಬ್ರೆಸ್ಟ್ ಮಿಲ್ಕ್ ಬ್ಯಾಂಕ್ ಎಂಬ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರಲ್ಲಿ ತಾಯಿ ತನ್ನ ಮಗುವಿಗೆ ನೀಡಿ, ಅಧಿಕವಾದ ಹಾಲನ್ನು ಮಿಲ್ಕ್ ಬ್ಯಾಂಕ್ಗೆ ದಾನ ಮಾಡಬಹುದಾಗಿದೆ.