ಸಹೋದರಿಯ ಮದುವೆ ಯಲ್ಲಿ ಫುಲ್ ಖುಷ್ ಆದ ಸಹೋದರ
ಈ ವಿಡಿಯೋವನ್ನು ಗುನ್ವೀತ್ ಸಿಂಗ್ ಡಾಂಗ್ ಎಂಬ ಸಹೋದರ ತನ್ನ ಸಹೋದರಿ ತಾನ್ಯಾ ಕೌರ್ ಅವರೊಂದಿಗೆ ಜಂಟಿಯಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತಾನ್ಯಾ ತನ್ನ ಮದುವೆಯ ಉಡುಪಿನಲ್ಲಿ ಕೋಣೆಯಲ್ಲಿ ಕುಳಿತಿದ್ದಾಗ ಅವಳ ಸಹೋದರ ಕೋಣೆಗೆ ಪ್ರವೇಶಿಸುವುದರೊಂದಿಗೆ ಈ ವಿಡಿಯೋ ಶುರುವಾಗುತ್ತದೆ. ನಂತರ ಅವನ ಸಹೋದರಿಯನ್ನು ವಧುವಿನ ಅಲಂಕಾರದಲ್ಲಿ ನೋಡಿ ಸಾಕಷ್ಟು ಆಶ್ಚರ್ಯಚಕಿತನಾಗುತ್ತಾನೆ.
ಅವರ ಪ್ರತಿಕ್ರಿಯೆಯನ್ನು ಇನ್ಸ್ಟಾಗ್ರಾಮ್ನಲ್ಲಿ ಅನೇಕರ ಹೃದಯಗಳನ್ನು ಗೆಲ್ಲುತ್ತಿದೆ ಮತ್ತು ನಿಮ್ಮ ಮೇಲೂ ಅದೇ ಪರಿಣಾಮ ಬೀರುವ ಸಾಧ್ಯತೆಯಿದೆ. “ನಾನು ಇದನ್ನು ಟೈಪ್ ಮಾಡುವಾಗ ಅಳು ಬರುತ್ತಿದೆ, ಆದರೆ ನನ್ನ ಸಹೋದರಿ ತುಂಬಾನೇ ಸುಂದರವಾಗಿ ಕಾಣುತ್ತಿದ್ದಾಳೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ಶೀರ್ಷಿಕೆಯು ಪಂಜಾಬಿ ವೆಡ್ಡಿಂಗ್ ಮತ್ತು ಡೆಲ್ಲಿ ವೆಡ್ಡಿಂಗ್ನಂತಹ ಕೆಲವು ಹ್ಯಾಶ್ ಟ್ಯಾಗ್ಗಳೊಂದಿಗೆ ಪೂರ್ಣಗೊಂಡಿದೆ.
ಈ ರೀತಿಯ ವಿಡಿಯೋಗಳನ್ನು ನಾವು ಈಗಾಗಲೇ ಅನೇಕ ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಈ ರೀತಿಯ ವಿಡಿಯೋಗಳು ಯಾವಾಗಲೂ ಇಂಟರ್ನೆಟ್ನಲ್ಲಿ ಬಹು ಬೇಗನೆ ವೈರಲ್ ಆಗುತ್ತವೆ. ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಒಂದು ವಿಡಿಯೋದಲ್ಲಿ ಒಬ್ಬ ಸಹೋದರ ತನ್ನ ಸಹೋದರಿಯನ್ನು ವಧುವಿನ ಸೀರೆಯಲ್ಲಿ ನೋಡಿ ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ. ನಿಜಕ್ಕೂ ಈ ವಿಡಿಯೋ ನಿಮ್ಮ ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada