ಹುಬ್ಬಳ್ಳಿ: ಹುಬ್ಬಳ್ಳಿಯ ಉಣಕಲ್ ನ ಚಂದ್ರಮೌಳೇಶ್ವರ ದೇವಸ್ಥಾನದಲ್ಲೂ ಯುಗಾದಿ ಸಂಭ್ರಮ ಕಳೆಗಟ್ಟಿದ್ದು, ಮುಂಜಾನೆಯ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಘಳಿಗೆಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಹೌದು ಹುಬ್ಬಳ್ಳಿ ಯಲ್ಲಿ ಶತಮಾನಗಳಷ್ಟು ಹಳೆಯದಾದ ಚಂದ್ರಮೌಳೇಶ್ವರನ ದರ್ಶನ ಪಡೆದರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದಾಗಿದೆ. ಈ ಹಿನ್ನೆಲೆಯಲ್ಲಿ ಯುಗಾದಿ ದಿನದಂದು ದೇವಸ್ಥಾನಕ್ಕೆ ಭೇಟಿ ನೀಡಿ ಸೂರ್ಯ ರಶ್ಮಿ ಶಿವಲಿಂಗ ಸ್ಪರ್ಶಿಸುವುದರ ದರ್ಶನ ಪಡೆಯುತ್ತಾರೆ. ಇದು 12 ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಕಟ್ಟಲಾದ ದೇವಸ್ಥಾನವಾಗಿದ್ದು, ಚತುರ್ಮುಖ ಶಿವಲಿಂಗ ಇಲ್ಲಿನ ವಿಶೇಷವಾಗಿದೆ. ಯುಗಾದಿ ಹಬ್ಬದ ದಿನ ಬೆಳಗ್ಗೆ 6-45 ರಿಂದ 7 ಗಂಟೆಯವರೆಗೆ ಈ ಚತುರ್ಮುಖ ಲಿಂಗದ ಮೇಲೆ ಸೂರ್ಯರಶ್ಮಿ ಬೀಳುವುದು ವಿಶೇಷವಾಗಿದೆ. ಈ ಸಂದರ್ಭದಲ್ಲಿ ಅನೇಕ ಭಕ್ತರು ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ.
Next Post
RRR ಸಿನಿಮಾದ ಒಟಿಟಿ ರಿಲೀಸ್ ಡೇಟ್ ಫಿಕ್ಸ್..
Mon Apr 4 , 2022
ಈ ಸಿನಿಮಾದ ಒಟಿಟಿ ದಿನಾಂಕಕ್ಕೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೀ5 ತೆಲುಗು, ತೆಮಿಳು, ಮಲಯಾಳಂ ಮತ್ತು ಕನ್ನಡ ಹಕ್ಕುಗಳನ್ನು ಪಡೆದುಕೊಂಡಿದೆ. ನೆಟ್ಫ್ಲಿಕ್ಸ್ ಹಿಂದಿ ಹಕ್ಕುಗಳನ್ನು ಖರೀದಿಸಿದೆ. ಆರ್ಆರ್ಆರ್(ರೌದ್ರಂ ರಣಂ ರುಧಿರಂ) ರಾಜಮೌಳಿ ನಿರ್ದೇಶಿಸಿದ ಮತ್ತು ಎನ್ಟಿಆರ್ ಮತ್ತು ರಾಮ್ ಚರಣ್ ನಟಿಸಿದ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆಯುತ್ತುದೆ. ಹಲವಾರು ವಿಳಂಬಗಳ ನಂತರ, ಚಿತ್ರವು ಮಾರ್ಚ್ 25 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ವಿಶ್ವಾದ್ಯಂತ […]

You May Like
-
11 months ago
ರಾಸುಗಳಿಗೆ ಅರವಟ್ಟಿಗೆ ಸ್ಥಾಪಿಸಿ.