ಕೆಜಿಎಫ್ ಚಾಪ್ಟರ್ 2 ರಿಲೀಸ್ಗೆ ಕ್ಷಣಗಣನೆ ಶುರುವಾಗಿದ್ದು, ಇತ್ತೀಚೆಗೆ ಟ್ರೈಲರ್ ರಿಲೀಸ್ ಮಾಡಿದ ಚಿತ್ರತಂಡ, ಭರ್ಜರಿ ಪ್ರಚಾರಕ್ಕೆ ಇಳಿದಿದೆ. ಇದರ ಮಧ್ಯೆ ಒಂದು ನೋವಿನ ಸಂಗತಿ ಏನಂದ್ರೆ, ರಾಷ್ಟçವಾದಿ ನಟ ಅಂತಾನೆ ಖ್ಯಾತಿ ಪಡೆದಿರೋ ಅಪ್ಪಟ ದೇಸಿ ಕಲಾವಿದ ಅನಂತ್ ನಾಗ್ರನ್ನ ಕೈಬಿಟ್ಟಿರೋದು. ಕೆಜಿಎಫ್ ಮೊದಲ ಭಾಗದಲ್ಲಿ ಕಥೆಯ ವೇಗಕ್ಕೆ ಜೀವ ತುಂಬಿದ್ದು ಇದೇ ಅನಂತ್ ನಾಗ್. ಈಗ ಅವರ ಜಾಗಕ್ಕೆ ಪ್ರಕಾಶ್ ರಾಜ್ ತಂದಿರೋದ್ರಿAದ ದೇಶಪ್ರೇಮಿ ವೀಕ್ಷಕರು ಈಗಾಗಲೇ ಚಿತ್ರವನ್ನು ನೋಡದೇ ಬಾಯ್ಕಟ್ ಮಾಡಲು ನಿರ್ಧರಿಸಿದ್ದಾರೆ.
ಬೆಳೆದು ಬಂದ ಹಾದಿ ಮರೆತ ಪ್ರಶಾಂತ್ ನೀಲ್..?
ಕೆಜಿಎಫ್ ಪ್ಯಾನ್ ಇಂಡಿಯಾ ಹಿಟ್ ಆದ ಕೂಡಲೇ ಹಳೆಯದನ್ನೆಲ್ಲಾ ಮರೆತ ಪ್ರಶಾಂತ್ ನೀಲ್ ಗೆಲುವಿಗೆ ಕಾರಣರಾದವರನ್ನೆಲ್ಲಾ ಮರೆತುಬಿಟ್ಟಿದ್ದಾರೆ. ಸದಾ ದೇಶ ಭಾಷೆಗೆ ಮಿಡಿಯೋ ಅನಂತ್ ನಾಗ್ರಿಗೆ ಕೈಕೊಟ್ಟು ದೇಶಪ್ರೇಮಿಗಳ ಕೋಪಕ್ಕೆ ಗುರಿಯಾಗಿದ್ದಾರೆ ನೀಲ್. ಈ ಹಿಂದೆ ಕೆಜಿಎಫ್-೨ ನಲ್ಲಿ ಅನಂತ್ ನಾಗ್ ಬದಲಿಗೆ ಪ್ರಕಾಶ್ ರಾಜ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳು ಶುರುವಾಗಿತ್ತು ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಾಪ್ಟರ್ ೨ ನಲ್ಲಿ ಹಿರಿಯ ನಟ ಅನಂತ್ ನಾಗ್ ಬದಲಿಗೆ ನಟ ಪ್ರಕಾಶ್ ರಾಜ್ ಅವರು ಕಾಣಿಸಿಕೊಂಡಿಲ್ಲವೆAದು ಹೇಳಿಕೊಂಡು ಕಥೆ ಕಟ್ಟಿದ್ರು. ಆದ್ರೆ ಆ ಊಹಾಪೋಹಗಳೇ ನಿಜವಾಗಿದೆ.
ಈ ಹಿಂದೆ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್, ಖಾಸಗಿ ವಾಹಿನಿಯ ಸಂದರ್ಶನವೊAದರಲ್ಲಿ ಪ್ರಕಾಶ್ ರಾಜ್ ಅವರು ಅನಂತ್ ನಾಗ್ ಅವರನ್ನು ಬದಲಾಯಿಸಿಲ್ಲ ಮತ್ತು ಸಂಪೂರ್ಣವಾಗಿ ವಿಭಿನ್ನ ಪಾತ್ರವನ್ನು ನಿರ್ವಹಿಸಲು ಬಂದಿದ್ದಾರೆ ಎಂದು ಹೇಳಿಕೊಂಡಿದ್ರು… ಪ್ರಕಾಶ್ ರಾಜ್ ಖಂಡಿತವಾಗಿಯೂ ಅನಂತ್ ನಾಗ್ ಬದಲಿಗೆ ಅಲ್ಲ. ಅವರದ್ದು ಹೊಸ ಎಂಟ್ರಿ ಮತ್ತು ಇದು ಸಿನಿಮಾದಲ್ಲಿ ಹೊಸ ಪಾತ್ರವಾಗಿದೆ ಅಂತೆಲ್ಲಾ ಕಥೆ ಕಟ್ಟಿದ್ರು.
ವಾ : ಕನ್ನಡದಲ್ಲೇ ಹುಟ್ಟಿ ಬೆಳೆದು ಕನ್ನಡ ನಾಯಕರನ್ನ ಹಾಕಿ ಸಿನಿಮಾ ಮಾಡುವ ಮೂಲಕ ಫೇಮಸ್ ಆಗ್ತಾರೆ ಒಂದು ಹಂತಕ್ಕೆ ಹೆಸರು ಮಾಡಿದ ಮೇಲೆ ತಮ್ಮ ಬೇಳೆ ಬೇಯಿಸಿಕೊಳ್ಳೋದಕ್ಕೆ ಪರ ಭಾಷಾ ನಟರು, ಬಹುಭಾಷಾ ನಟರನ್ನ ಹಾಕಿಕೊಂಡು ಸಿನಿಮಾ ಮಾಡ್ತಾರೆ. ಅವರು ಒಂದAತಕ್ಕೆ ಹೋಗೋದಕ್ಕೆ ಕಾರಣರಾದವರನ್ನೇ ಮರೆತು ಬಿಡ್ತಾರೆ ಹಾಗೆ ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡದ ಹಿರಿಯ ನಾಯಕ ನಟ ಅನಂತ್ ನಾಗ್ ರಿಗೆ ಕೈಕೊಟ್ಟು ಅಅನ್ನಯಾಯ ಮಾಡಿರೋದು ನಿಜಕ್ಕೂ ಬೇಜಾರಿನ ಸಂಗತಿ.