ಸಂಜೆ ನಾಪತ್ತೆಯಾಗಿದ್ದ ಅಕ್ಕ-ತಂಗಿ ಇಂದು ಶವವಾಗಿ ಪತ್ತೆ!

ಶನಿವಾರ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ಅಕ್ಕ-ತಂಗಿ ಶವವಾಗಿ ಭಾನುವಾರ ಮಧ್ಯಾಹ್ನ ಪತ್ತೆಯಾಗಿದ್ದಾರೆ.ಅಗಲಗುರ್ಕಿ ಗ್ರಾಮದ ಅಶ್ವಿನಿ(16) ಮತ್ತು ನಿಶ್ಚಿತಾ(14) ಮೃತವಾದ ಅಕ್ಕ-ತಂಗಿ. ಅಕ್ಕ ಅಶ್ವಿನಿ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು.ಈ ವಿಚಾರ ಗೊತ್ತಾಗಿ ಮಗಳಿಗೆ ಅಪ್ಪ-ಅಮ್ಮ ಬೈದು ಬುದ್ಧಿವಾದ ಹೇಳಿದ್ದರು. ಮನನೊಂದ ಅಶ್ವಿನಿ, ತನ್ನ ತಂಗಿಯನ್ನೂ ಕರೆದುಕೊಂಡು ಮನೆಯಿಂದ ನಿನ್ನೆ ಸಂಜೆ ಹೊರ ಹೋಗಿದ್ದಳು. ರಾತ್ರಿ ಎಷ್ಟೊತ್ತಾದರೂ ಅಕ್ಕ-ತಂಗಿ ಇಬ್ಬರೂ ಮನೆಗೆ ವಾಪಸ್​ ಬಂದಿರಲಿಲ್ಲ. ಮನೆಯವರು ಊರೆಲ್ಲಾ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.ಭಾನುವಾರ ಮಧ್ಯಾಹ್ನ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಅಕ್ಕ-ತಂಗಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಅಯ್ಯೋ, ಮಗಳೇ ಇದೆಂಥಾ ಶಿಕ್ಷೆ ಕೊಟ್ಟವ್ವಾ? ನೀನಾದ್ರೂ ಎದ್ದೇಳವ್ವಾ, ಇಬ್ರೂ ನಮ್ಮನ್ನ ಬಿಟ್ಟು ಯಾಕ್ರವ್ವ ಹೋಗಿಬಿಟ್ರಿ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಕಂಡು ಬಂದಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂದೆ-ತಾಯಿ ಬೈದಿದ್ದಕ್ಕೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಕೊಲೆಸ್ವ್ರಾಲ್ ಕಡಿಮೆ ಮಾಡಿಕೊಳ್ಳಲು ತಪ್ಪದೆ ಈ ಆಹಾರಗಳನ್ನು ಸೇವಿಸಿ

Mon Mar 28 , 2022
ಇತ್ತೀಚಿನ ದಿನಗಳಲ್ಲಿ ಕೊಲೆಸ್ವ್ರಾಲ್ ಸಮಸ್ಯೆಗಳು ತುಂಬಾ ಹೆಚ್ಚಾಗಿವೆ. ಫಿಟ್  ಹೃದಯಕ್ಕಾಗಿ ನಮ್ಮ ದೇಹದಲ್ಲಿ ಒಂದು ಕೊಬ್ಬಿನ ಪದಾರ್ಥವಾಗಿದೆ. ಇದು ದೇಹಕ್ಕೆ ಅವಶ್ಯಕವಾಗಿದೆ, ಆದರೆ ಹೆಚ್ಚಿನ ಕೊಲೆಸ್ವ್ರಾಲ್ ಹೃದಯಾಘಾತ ಮತ್ತು ಸ್ವ್ರೋಕ್ ಅಂತಹ ಅಪಾಯವು ಹೆಚ್ಚಾಗುತ್ತದೆ.  ಒಳ್ಳೆಯ ಮತ್ತು ಕೆಟ್ಟ ಕೊಲೆಸ್ವ್ರಾಲ್ ದೇಹದಲ್ಲಿ ಕಂಡುಬರುತ್ತದೆ.  ಇವುಗಳನ್ನು ನಿಯಂತ್ರಿಸಲು ಕೆಲವು ತರಕಾರಿಗಳಿವೆ ಅವು ಯಾವುವು? ಅವುಗಳಿಂದ ಹೆಚ್ಚಿನ ಕೊಲೆಸ್ವ್ರಾಲ್ ಅನ್ನು ಹೇಗೆ ನಿಯಂತ್ರಿಸಬಹುದು ಎಂಬುವುದನ್ನು ನೊಡೋಣ. ಬ್ಲಾಕ್ ಮತ್ತು ಗ್ರೀನ್ ಟೀ : […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: