ಸೆಟ್ಟೇರಿತು ಚಿನ್ನಾರಿ ಮುತ್ತನ ಮತ್ತೊಂದು ಹೊಸ ಸಿನಿಮಾ..

 

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಾಯಕ ನಟ ವಿಜಯ್ ರಾಘವೇಂದ್ರ ಮತ್ತೊಮ್ಮೆ ಹೊಸ ತಂಡದ ಜೊತೆ ಕೈ ಜೋಡಿಸಿದ್ದಾರೆ. ಈ ಹಿಂದೆ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ  24/7 ಹಾಗೂ ವಿರಾಮದ ನಂತರ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ರಮಣ್ ರಾಜ್ ಕೆ ಈ ಬಾರಿಗೆ ವಿಜಯ್ ರಾಘವೇಂದ್ರಗೆ ಆಕ್ಷನ್ ಕಟ್ ಹೇಳಿದ್ದಾರೆ. FIR 6 to 6 ಎಂಬ ಕ್ಯಾಚಿ ಟೈಟಲ್ ನಡಿ ಸಿನಿಮಾ ಮೂಡಿ ಬರ್ತಿದ್ದು, ಇವತ್ತು ಬೆಂಗಳೂರಿನ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿತು.       ಉಪ್ಪಿ ಶ್ರೀಮತಿ ಪ್ರಿಯಾಂಕಾ ಉಪೇಂದ್ರ ಸಿನಿಮಾಗೆ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

 

ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ FIR 6 to 6 ಸಿನಿಮಾದಲ್ಲಿ ವಿಜಯ್ ರಾಘವೇಂದ್ರಗೆ ಜೋಡಿಯಾಗಿ ಅಕ್ಷಿತಾ ಬೋಪಯ್ಯ ನಟಿಸ್ತಿದ್ದು, ಉಳಿದಂತೆ ಯಶ್ ಶೆಟ್ಟಿ, ಬಾಲರಾಜ್ ವಾಡಿ, ಎಸ್ ಕೆ ನಾಗೇಂದ್ರ ಅರಸ್, ಶ್ರೀ ರಾಜು ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

 

ಯಶ್ ಫಿಲ್ಮಂ ಪ್ರೊಡಕ್ಷನ್ ಬ್ಯಾನರ್ ನಡಿ ಭಾಗ್ಯ ಆರ್ ಸಿನಿಮಾಗೆ ಬಂಡವಾಳ ಹೂಡಿದ್ದು, ಎಸ್.ಕೆ.ನಾಗೇಂದ್ರ ಅರಸ್ ಸಂಕಲನ, ಸತೀಶ್ ಬಾಬು ಸಂಗೀತ ನಿರ್ದೇಶನ ಹಾಗೂ ಓಂ.ಜಿ ಛಾಯಾಗ್ರಹಣ FIR 6 to 6 ಸಿನಿಮಾಕ್ಕಿದೆ. ವಿಶೇಷವಾಗಿ  ಓಂ ಜಿ ಈ ಸಿನಿಮಾಗೆ ಐದು ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡುತ್ತಿದ್ದಾರೆ. ಇಂದಿನಿಂದಲೇ ಶೂಟಿಂಗ್ ಶುರುವಾಗಿದ್ದು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಭರದಿಂದ ಸಾಗ್ತಿದೆ

Leave a Reply

Your email address will not be published. Required fields are marked *

Next Post

ಮೊಟ್ಟ ಮೊದಲ ಬಾರಿಗೆ ಹನ್ನೊಂದು ರಾಷ್ಟ್ರದಲ್ಲಿ ತೆರೆ ಕಾಣಲಿರುವ ತುಳು ಸಿನಿಮಾ!

Tue Apr 19 , 2022
  ತುಳು‌ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ‌ ಬಾರಿಗೆ ಪ್ರಪಂಚದ 11 ರಾಷ್ಟ್ರದಲ್ಲಿ ತುಳು ಚಿತ್ರ ಬಿಡುಗಡೆಯಾಗುತ್ತಿದೆ. ವೈಭವ್ ಪ್ಲಿಕ್ಸ್ ನ ಮ್ಯಾಂಗೋ ಪಿಕಲ್ ಬ್ಯಾನರ್ ಅಡಿಯಲ್ಲಿ ತಯಾರಾದ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಸಿನಿಮಾ ಈ ಚಿತ್ರವನ್ನು ಯುವನಟ ರಾಹುಲ್ ಅಮೀನ್ ನಿರ್ದೇಶನ ಮಾಡಿದ್ದು,ಆನಂದ್ ಎನ್ ಕುಂಪಲ ನಿರ್ಮಾಪಕ ರಾಗಿದ್ದಾರೆ..ಸಿನಿಮಾ ದ ನಾಯಕ ನಟ ವಿನೀತ್ ಕುಮಾರ್ ಆಗಿದ್ದು,ಅವರೇ ಸಿನಿಮಾ ಕಥೆಯನ್ನು ಮಾಡಿದ್ದಾರೆ.ಚಿತ್ರ ಸಂಭಾಷಣೆ ಯನ್ನು ಪ್ರಸನ್ನ ಶೆಟ್ಟಿ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: