ಎಳನೀರಿನಲ್ಲಿರೋಗ ನಿರೋಧಕ ಶಕ್ತಿ ಇದೆಯಾ, ಕಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯೊದು ಉತ್ತಮನಾ, ತ್ವಚೆಯ ಕಾಂತಿ ಹೆಚ್ಚಿಸುತ ಎಳನೀರು,
ತೆಂಗನ್ನು ಕಲ್ಪವೃಕ್ಷ ಎಂದು ಕರೆದಿರುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ತೆಂಗಿನ ಪ್ರತಿ ಭಾಗವೂ ಉಪಯುಕ್ತವೇ ಹೌದು. ಆರೋಗ್ಯದ ವಿಷಯಕ್ಕೆ ಬಂದಾಗ ತೆಂಗಿನ ತಿರುಳು, ನೀರು ಮತ್ತು ತೈಲ, ಇವೆಲ್ಲವೂ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತವೆ. ಕೊಬ್ಬರಿ ಎಣ್ಣೆಯಂತೂ ತ್ವಚೆ, ಕೇಶ ಹಾಗೂ ಜೀರ್ಣಾಂಗಗಳಿಗೆ ನೀಡುವ ಪ್ರಯೋಜನಗಳ ಭಂಡಾರವನ್ನೇ ಒದಗಿಸುತ್ತದೆ. ಎಳನೀರು ಈ ಜಗತ್ತಿನಲ್ಲಿ ದೊರಕುವ ಅತ್ಯುತ್ತಮ ಜೀವಜಲವಾಗಿದ್ದು ಇದರಷ್ಟು ಆರೋಗ್ಯಕರವಾದ ಪಾನೀಯ ಇನ್ನೊಂದಿಲ್ಲ ಎಂದು ಖಚಿತವಾಗಿ ಹೇಳಬಹುದು. ಬನ್ನಿ, ಎಳನೀರಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ..
* ಎಳನೀರು ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದ್ದು ತೂಕ ಇಳಿಕೆಯ ಪ್ರಯತ್ನಗಳಿಗೆ ಅತಿ ಹೆಚ್ಚಿನ ನೆರವು ನೀಡುತ್ತದೆ. ಅಲ್ಲದೇ ಅಗತ್ಯವಿರುವ ಶಕ್ತಿಯನ್ನು ತಕ್ಷಣವೇ ಒದಗಿಸುವುದು, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು, ಸೂಕ್ಷ್ಮಜೀವಿಗಳಿಂದ ರಕ್ಷಣೆ ಒದಗಿಸುವುದು, ಮೂತ್ರದ ಪ್ರಮಾಣ ವರ್ಧಿಸಿ ದೇಹದಿಂದ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.
* ನಿತ್ಯವೂ ಬೆಳಗಿನ ಪ್ರಥಮ ಆಹಾರವಾಗಿ ಒಂದು ಭರ್ತಿ ಎಳನೀರನ್ನು ಕುಡಿದರೆ ದಿನದ ಅಗತ್ಯದ ಎಲೆಕ್ಟ್ರೋಲೈಟುಗಳು ಲಭಿಸುತ್ತವೆ ಹಾಗೂ ಇವು ಅಧಿಕ ರಕ್ತದೊತ್ತಡ ಎದುರಾಗದಂತೆ ತಡೆಯುತ್ತವೆ.
ತ್ವಚೆಯ ಕಾಂತಿ ಹೆಚ್ಚಿಸುವ ಎಳನೀರು,
ತ್ವಚೆಯ ಆರೋಗ್ಯ ಉತ್ತಮವಾಗಿರಲು ದೇಹದಲ್ಲಿ ಸಾಕಷ್ಟು ಪ್ರಮಾಣದ ಆರ್ದ್ರತೆ ಇರಬೇಕು. ಎಳನೀರನ್ನು ಕುಡಿಯುವ ಹೊರತಾಗಿ ಎಳನೀರನ್ನು ತ್ಬೆಚೆಗೆ ಹಚ್ಚಿಕೊಳ್ಳುವ ಮೂಲಕವೂ ಅಗತ್ಯವಿರುವ ಪೋಷಣೆಯನ್ನು ಒದಗಿಸಬಹುದು. ಪರಿಣಾಮವಾಗಿ ಕ್ಷಿಪ್ರ ಸಮಯದಲ್ಲಿಯೇ ತ್ವಚೆ ಹೊಳೆಯಲಾರಂಭಿಸುತ್ತದೆ. ಎಳನೀರು ನೈಸರ್ಗಿಕ ಹಾಗೂ ಅತ್ಯುತ್ತಮವಾದ ತೇವಕಾರಕವಾಗಿದೆ ಹಾಗೂ ಈ ಗುಣ ಮೊಡವೆಗಳನ್ನು ದೂರವಿಡುತ್ತದೆ. ಎಳನೀರಿನಲ್ಲಿರುವ ಸೈಟೋಕಿನಿನ್ ಎಂಬ ಪೋಷಕಾಂಶಕ್ಕೆ ಚರ್ಮದ ಸೆಳೆತವನ್ನು ಹೆಚ್ಚಿಸುವ ಗುಣವಿದ್ದು ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ತಡವಾಗಿಸಿ ವೃದ್ದಾಪ್ಯವನ್ನು ಮುಂದೂಡುತ್ತದೆ. ಅಲ್ಲದೇ ಎಕ್ಸಿಮಾ ಎಂಬ ಚರ್ಮರೋಗಕ್ಕೆ ಅತ್ಯುತ್ತಮ ಔಷಧಿಯೂ ಹೌದು.
ಅತ್ಯುತ್ತಮವಾಗಿ ಬಾಯಾರಿಕೆಯ ದಾಹವನ್ನು ಇಂಗಿಸುತ್ತದೆ ಬಾಯಾರಿಕೆಗೆ ಎಳನೀರಿಗಿಂತ ಉತ್ತಮವಾದ ಜಲ ಈ ಜಗತ್ತಿನಲ್ಲಿಲ್ಲ. ವಿಶೇಷವಾಗಿ ಇದರಲ್ಲಿರುವ ಎಲೆಕ್ಟ್ರೋಲೈಟುಗಳು ದಣಿದ ದೇಹಕ್ಕೆ ಶಕ್ತಿಯನ್ನು ಒದಗಿಸುವ ಜೊತೆಗೇ ಬೆವರು, ಅತಿಸಾರ, ವಾಂತಿ ಮೊದಲಾದ ಕಾರಣಗಳಿಂದ ದೇಹದಿಂದ ನಷ್ಟವಾಗಿದ್ದ ನೀರಿನಂಶವನ್ನು ಮರುದುಂಬಿಸಿ ಕೋಡುತ್ತದೆ.
ರಕ್ತದೊತ್ತಡದ ಮಟ್ಟಗಳನ್ನು ತಗ್ಗಿಸುತ್ತದೆ,ಎಳನೀರಿನಲ್ಲಿಯೂ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದ್ದು ಇದರ ಜೊತೆಗೇ ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತವೆ. ಎಳನೀರಿನ ಅತ್ಯುತ್ತಮ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.