ಎಸಿ ಸ್ಫೋಟಕ್ಕೆ ನಾಲ್ವರು ಉಸಿರುಗಟ್ಟಿ ಸಾವು.!
ಬೇಸಿಗೆ ಹಿನ್ನೆಲೆ ಜನರು ಫ್ಯಾನ್, ರೆಫ್ರಿಜಿರೇಟರ್, ಕೂಲರ್, ಎಸಿಗಳ ಮೊರೆ ಹೋಗವುದು ಹೆಚ್ಚು, ನಿಮ್ಮ ವಿದ್ಯುನ್ಮಾನ ಯಂತ್ರಗಳ ನಿರ್ವಹಣೆಯ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು. ಇಲ್ಲವಾದ್ರೆ ದೊಡ್ಡ ಅನಾಹುತಗಳೇ ಸಂಭವಿಸುತ್ತವೆ. ಇದೀಗ ಇದೇ ರೀತಿಯ ಘಟನೆ ನಡೆದಿದೆ.
ಎಸಿ ಸ್ಪೋಟಗೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯನಗರದ ಮರಿಯಮ್ಮನಹಳ್ಳಿ ಗ್ರಾಮದ 5ನೇ ವಾರ್ಡಿನಲ್ಲಿ ನಡೆದಿದೆ.
ರಾತ್ರಿ 12.45ರ ಸುಮಾರಿಗೆ ರಾಘವೇಂದ್ರ ಶೆಟ್ಟಿವರ ಮನೆಯಲ್ಲಿ ಶಾಟ್ ಸರ್ಕ್ಯೂಟ್ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಳ್ಳುತ್ತಿದ್ದಂತೆ ರಾಘವೇಂದ್ರ ಶೆಟ್ಟಿ ಪತ್ನಿ ಜೊತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಬೆಡ್ ರೂಮ್ ನಲ್ಲಿ ಮಲಗಿದ್ದ ರಾಘವೇಂದ್ರ ಶೆಟ್ಟಿಯವರ ಮಗನ ಕುಟುಂಬಕ್ಕೆ ಹೊರಗೆ ಬರಲು ಆಗದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ದಂಪತಿ ಮತ್ತು ಎರಡು ಮುದ್ದಾದ ಮಕ್ಕಳ ಸಾವು ಆಗಿದೆ. ಇಡೀ ಕುಟುಂಬ ಉಸಿರುಗಟ್ಟಿ ಮತ್ತು ಸುಟ್ಟಗಾಯಗಳಿಂದ ಮನೆಯಲ್ಲಿಯೇ ಸಾವನ್ನಪ್ಪಿದೆ.
ಸದ್ಯ ನಾಲ್ಕು ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಳಿ ವಯಸ್ಸಿನಲ್ಲಿ ಮಗ, ಸೊಸೆ ಹಾಗೂ ಮೊಮ್ಮಕ್ಕಳನ್ನು ಕಳೆದುಕೊಂಡ ರಾಘವೇಂದ್ರ ಶೆಟ್ಟಿ ಮತ್ತು ಕುಟುಂಬ ದಿಗ್ಬ್ರಮೆಯಲ್ಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada