ಕೊನೆಗೂ ಕೊರೊನಾ ಕಿರಿ ಕಿರಿ ಕಾಲರ್ ಟ್ಯೂನ್ ಗೆ ಫುಲ್ ಸ್ಟಾಪ್…!

ಕಿರಿ ಕಿರಿಯ ಕಾಲರ್ ಟ್ಯೂನ್ ಗೆ ಕೊನೆಗೂ ಬಿತ್ತು ಬೀಗ. ಕೊರಾನಾ ಮಹಾಮಾರಿ ಕೋವಿಡ್-19 ಎರಡು ವರ್ಷಗಳ ಹಿಂದೆ  ದೇಶವನ್ನು ಹಬ್ಬಿದಾಗ ಕೋವಿಡ್-19 ಕಾಲರ್ ಟ್ಯೂನ್​ನ್ನು ಪ್ರಾರಂಭಿಸಲಾಯಿತು.ಇದರ ಮಧ್ಯೆ, ಕೊರೊನಾ ವೈರಸ್ ಜಾಗೃತಿ ಮತ್ತು ಮುನ್ನೆಚ್ಚರಿಕೆಗಳನ್ನು ಕುರಿತು ಕಾಲರ್ ಟ್ಯೂನ್​ನ್ನು ನಿಲ್ಲಿಸಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್​ಐ ತಿಳಿಸಿದೆ. ಮಹಾಮಾರಿ ಕೋವಿಡ್  ರೋಗದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿತ್ತು. ಎಂದೂ ಕೇಳದ ಮತ್ತು  ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಕೋವಿಡ್-19 ಕಾಲರ್ ಟ್ಯೂನ್​ನ್ನು ಎರಡು ವರ್ಷಗಳ ಹಿಂದೆ ಸಾಂಕ್ರಾಮಿಕ ರೋಗವು ದೇಶವನ್ನು ಆವರಿಸಿದಾಗ ಪ್ರಾರಂಭಿಸಲಾಯಿತು. ಭಾರತಿ ಏರ್‌ಟೆಲ್, ಬಿಎಸ್‌ಎನ್‌ಎಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾ ಸೇರಿದಂತೆ ಆಪರೇಟರ್‌ಗಳು ತಮ್ಮ ಕಾಲರ್ ಟ್ಯೂನ್‌ಗಳನ್ನು ಮಾರ್ಚ್ 2020 ರಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಬದಲಾಯಿಸಿದ್ದಾರೆ. ಮೊದಲು ಕೋವಿಡ್-19  ನಲ್ಲಿನ ಕಾಲರ್ ಟ್ಯೂನ್ ಜನರು ಕೆಮ್ಮುವುದು, ಸೀನುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನಂತರ ಕೊರೊನಾವೈರಸ್‌ನಿಂದ ರಕ್ಷಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಸಲಹೆಯೊಂದಿಗೆ ಪ್ರಾರಂಭವಾಗುತ್ತಿತ್ತು. ಆದರೆ ಈ ವರ್ಷದ ಜನವರಿಯಲ್ಲಿ, ಜನರು ಲಸಿಕೆ ಹಾಕುವಂತೆ ಒತ್ತಾಯಿಸುವ ಸಂದೇಶವನ್ನಾಗಿ ಬದಲಾಯಿಸಲಾಯಿತು.ಸರ್ಕಾರದ ಈ ನಿರ್ಧಾರದಿಂದ ಯಾರಿಗೆ ಖುಷಿ ಯಾಗಿದೆಯೋ ಇಲ್ಲವೋ, ಆದರೆ, ನೆಟ್ಟಿಗರಿಗಂತ್ತು ತುಂಬಾ ಖುಷಿಯಾದಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ಫೋಸ್ಟ್​ಗಳನ್ನು ಹಂಚಿಕೊಳ್ಳುತ್ತಿದ್ದು, ಕೊನೆಗೂ ಕಿವಿಗಳಿಗೆ ಮುಕ್ತಿ ನೀಡಲಾಯಿತು ಎನ್ನುವ ಫೋಸ್ಟ್​ಗಳು ಹರಿದಾಡುತ್ತಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ಕನಸಿನ ಬೆನ್ನತ್ತಿದ ತೇಜಸ್ವಿನಿ ಕೊಡವೂರ್

Tue Mar 29 , 2022
ವೃತ್ತಿ ಜೀವನದ ಯಶಸ್ಸಿನ ನಂತರ ಕನಸಿನ ಬೆನ್ನತ್ತಿದ ತೇಜಸ್ವಿನಿ ಕೊಡವೂರ್   ಫ್ಯಾಷನ್, ಸಿನಿಮಾ ಲೋಕದಲ್ಲಿ ಮಿಂಚುವ ಬಯಕೆಯಲ್ಲಿ ಮುಂದಡಿ..ಮಧ್ಯಮ ವರ್ಗದ ಕುಟುಂಬದಿಂದ ಬಂದು ಅಗಾಧವಾದ ಸಾಧನೆ ಮಾಡುವುದು ಕಷ್ಟದ ಕೆಲಸ. ಆದರೆ, ಆ ಕೆಲಸವನ್ನು ಅಷ್ಟೇ ಸಲೀಸಾಗಿಯೇ ಮಾಡಿದ್ದಾರೆ ಮತ್ತು ಅದನ್ನು ಮುಂದುವರಿಸಿದ್ದಾರೆ ಉಡುಪಿ ಮೂಲದ ತೇಜಸ್ವಿನಿ ಕೊಡವೂರ್. ಶಿಕ್ಷಣ, ಫ್ಯಾಷನ್, ಯೋಗ, ಉದ್ಯಮ, ವ್ಯವಹಾರ ಹೀಗೆ ಈ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರವರು. ಮಹಿಳೆಯರು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: