ಕೋವಿಡ್ ಲಸಿಕೆ ಹಾಗೂ ಮೂರನೇ ಅಲೆ ಕೋವಿಡ್ ಸೋಂಕಿನ ಬಳಿಕ ದೇಶದ ಜನರು ಮುಂಚಿನ ಜೀವನಕ್ಕೆ ಮರಳುತ್ತಿದ್ದಾರೆ. ಕಳೆದೆರಡು ವರ್ಷದಿಂದ ಕಾಡಿದ್ದ ಕೊರೋನಾ ಸೋಂಕು ದೂರ ಆಗಿದೆ ಎಂಬ ನೆಮ್ಮದಿಯಲ್ಲಿದ್ದಾರೆ. ಸರ್ಕಾರಗಳು ಕೂಡ ಕೋವಿಡ್ ನಿಯಮಾವಳಿಗಳನ್ನು ಸಡಿಲಗೊಳಿಸಿದೆ. ಈ ನಡುವೆ ಪ್ರಪಂಚದ ನಾನಾ ಮೂಲೆಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಭಾರೀ ಏರಿಕೆ ಕಾಣುತ್ತಿದೆ. ಇದು ಇದೀಗ ದೇಶದಲ್ಲೂ ಆತಂಕ ಮೂಡಿಸಿದೆ.ಯುರೋಪ್ ಸೇರಿದಂತೆ ಅನೇಕ ಕಡೆ ಹೆಚ್ಚಾದ ಸೋಂಕು.
ನೆರೆಯ ಚೀನಾ, ಅಮೆರಿಕ, ದಕ್ಷಿಣ ಏಷ್ಯಾ, ಜರ್ಮನಿ ಸೇರಿದಂತೆ ಅನೇಕ ದೇಶದಲ್ಲಿ ಕೋವಿಡ್ ಪ್ರಮಾಣ ಭಾರೀ ಏರಿಕೆ ಕಂಡಿವೆ. ಈ ಹಿನ್ನಲೆ ದೇಶದಲ್ಲೂ ಕೂಡ ನಾಲ್ಕನೇ ಕೋವಿಡ್ ಅಲೆ ಬರಲಿದೆಯಾ ಎಂಬ ಆತಂಕ ವ್ಯಕ್ತವಾಗಿದೆ. ಕಾರಣ ಈ ಹಿಂದೆ ಈ ದೇಶದಲ್ಲಿ ಕೋವಿಡ್ ಅಲೆ ಏರಿಕೆ ಕಂಡು ಇಳಿಕೆಯಾದ ಬಳಿಕ ಭಾರತದಲ್ಲಿ ಕೋವಿಡ್ ಹೊಸ ಅಲೆ ಎದುರಾಗಿ, ಸೋಂಕಿನ ಮಟ್ಟ ಏರಿಕೆ ಕಂಡಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada