ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ರಾಜೇಶ್ ಕಾಟನ್ ಜಿನ್ನಿಂಗ್ ಮತ್ತು ಪ್ರೆಸಿಂಗ್ ಮಿಲ್ನಲ್ಲಿ ಭಾರೀ ಅಗ್ನಿ ಅವಘಢ ಸಂಭವಿಸಿ ಕೋಟ್ಯಂತರ ಮೌಲ್ಯದ ಹತ್ತಿ ಹಾಗೂ ಹಿಂಡಿ ಬೆಂಕಿಗೆ ಆಹುತಿಯಾಗಿದೆ.ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಮಿಲ್ನಲ್ಲಿದ್ದ ಭಾರೀ ಪ್ರಮಾಣದ ಹತ್ತಿ ಹೊತ್ತಿ ಉರಿದಿದೆ.ಅಲ್ಲದೆ ಹಿಂಡಿ ಕೂಡ ಸುಟ್ಟು ಬೂದಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಎರಡು ಅಗ್ನಿಶಾಮಕ ತಂಡ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಸಂಭಾವ್ಯ ಅನಾಹುತಗಳನನು ತಪ್ಪಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗರಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.
ಬ್ರಿಟೀಷ್ ಕೌನ್ಸಿಲ್ 2022-23ರ ಶೈಕ್ಷಣಿಕ ವರ್ಷಕ್ಕೆ ವಿವಿಧ ಅಧ್ಯಯನ ಕ್ಷೇತ್ರಗಳಲ್ಲಿ ಭಾರತೀಯರಿಗೆ ಹೊಸ ಸ್ನಾತಕೋತ್ತರ (PG) ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಕೌನ್ಸಿಲ್, ಯುಕೆ ಸರ್ಕಾರದ ಗ್ರೇಟ್ ಬ್ರಿಟನ್ ಅಭಿಯಾನದ ಸಹಯೋಗದೊಂದಿಗೆ ಮತ್ತು ಯುಕೆ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ, ವ್ಯಾಪಾರ, ಹಣಕಾಸು, ಮಾನವಿಕತೆ, ಮನೋವಿಜ್ಞಾನ ಉದ್ಯಮಶೀಲತೆ, ವಿನ್ಯಾಸ, ಮುಂತಾದ ವಿವಿಧ ವಿಷಯಗಳಲ್ಲಿ 16 ಯುಕೆ ವಿಶ್ವವಿದ್ಯಾಲಯಗಳಲ್ಲಿ ಭಾರತದ ವಿದ್ಯಾರ್ಥಿಗಳಿಗೆ 20 ಗ್ರೇಟ್ ವಿದ್ಯಾರ್ಥಿವೇತನವನ್ನು ಘೋಷಿಸಿತು. ಇದರ ಜೊತೆಗೆ, ಯುಕೆಯಲ್ಲಿ ಮಾನವ ಹಕ್ಕುಗಳು, ಕ್ರಿಮಿನಲ್ ನ್ಯಾಯ […]