ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,938 ಹೊಸ ಕೋವಿಡ್ 19 ಸೋಂಕುಗಳು ವರದಿಯಾಗಿದ್ದು, ಭಾರತದ ಒಟ್ಟು ಪ್ರಕರಣಗಳ ಸಂಖ್ಯೆ 4,30,14,687 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಗುರುವಾರ. ಮಾ 24,ರಂದು ಮಾಹಿತಿ ನೀಡಿದೆ.
ಇಂದು 67 ದೈನಂದಿನ ಸಾವುಗಳೊಂದಿಗೆ ಭಾರತದ ಸಾವಿನ ಸಂಖ್ಯೆ 5,16,672 ಕ್ಕೆ ಏರಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 22,427 ಕ್ಕೆ ಇಳಿದಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,531 ಮಂದಿ ಸೋಂಕಿತರು ಚೇತರಿಕೆಯಾಗಿದ್ದಾರೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,24,75,588 ಕ್ಕೆ ಏರಿದೆ, ಸಾವಿನ ಪ್ರಮಾಣವು ಶೇಕಡಾ 1.20 ರಷ್ಟಿದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada