ಆತನಿಗೂ ಹೆಂಡ್ತಿನ ರಾಣಿ ಹಾಗೆ ನೋಡಿಕೊಳ್ಳಬೇಕು ಅಂತ ಆಸೆ. ಆದ್ರೆ ಆ ಆಸೆ ಪೂರೈಸೋಕೆ ಆತ ಕೆಲ್ಸಾನೇ ಮಾಡ್ತಿರಲಿಲ್ಲ. ಸೀದಾ ರಾಜಸ್ಥಾನದಿಂದ ಫ್ಲೈಟ್ ಹತ್ಕೊಂಡು ಬೆಂಗಳೂರಿಗೆ ಬರ್ತಿದ್ದ, ಮುಂದೆ ಇಲ್ಲಿ ಮಾಡಬಾರದ್ದು ಮಾಡ್ತಿದ್ದ. ಇದೀಗ ಕಿತಾಪತಿ ಕಳ್ಳ ತಗ್ಲಾಕೊಂಡಿದ್ದಾನೆ.
ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಕಳ್ಳತನ
ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಲುವಾಗಿ ಸರಗಳ್ಳತನ ಮಾಡುತ್ತಿದ್ದ ಖದೀಮನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಉಮೇಶ್ ಲತೀಕ್ ಎಂಬಾತನನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲು ಕಳ್ಳತನ ಮಾಡುತ್ತಿದ್ದನಂತೆ.
ಫ್ಲೈಟ್ನಲ್ಲಿ ಬೆಂಗಳೂರಿಗೆ ಬಂದು ಸರಗಳ್ಳತನ
ರಾಜಸ್ಥಾನ ಮೂಲದ ಉಮೇಶ್ ಖತಿಕ್ ಕಳ್ಳತನಕ್ಕೆ ಅಂತಾನೇ ಫ್ಲೈಟ್ನಲ್ಲಿ ರಾಜಸ್ಥಾನದಿಂದ ಬೆಂಗಳೂರಿಗೆ ಬರ್ತಿದ್ದ. . ಹಲವು ವರ್ಷಗಳ ಹಿಂದೆ ರಾಜಧಾನಿಯಲ್ಲಿ ಈತ ಬೈಕ್ ಕಳ್ಳತನ ಮಾಡುತ್ತಿದ್ದ. ಕದ್ದ ಬೈಕಿನಲ್ಲಿ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ. ಕಳ್ಳತನ ಬಳಿಕ ಊರಿಗೆ ರೈಲಿನಲ್ಲಿ ತೆರಳಿ ಹೆಂಡತಿಯನ್ನು ರಾಯಲ್ ಆಗಿ ನೋಡಿಕೊಳ್ಳುತ್ತಿದ್ದನಂತೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada