ಗ್ರಾಮೀಣ ಭಾಗದಲ್ಲಿರುವ ಅಸೃಶ್ಯತೆಯನ್ನು ಸಂಪೂರ್ಣವಾಗಿ ನಿಮೂರ್ಲನೆ ಮಾಡಲು ಉದ್ದೇಶಿಸಿರುವ ಜಾಗೃತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ವಿನಯ ಸಾಮರಸ್ಯ ಎಂದು ಹೆಸರು ಇರಿಸಿದೆ ಕಳೆದ ವರ್ಷ ಅಂದ್ರೆ ಸೆಪ್ಟೆಂಬರ್ ನಲ್ಲಿ ಕೊಪ್ಪಳ ಜಿಲ್ಲೆಯ ವಿಯಾಪುರ ಗ್ರಾಮದಲ್ಲಿ ಮೂರು ವರ್ಷದ ದಲಿತ ಮಗುವೊಂದು ಆಕಸ್ಮಿಕವಾಗಿ ದೇವಾಲಯ ಪ್ರವೇಶ ಮಾಡಿದ್ದಕ್ಕೆ, ಗ್ರಾಮದ ಜನರು ಆ ಮಗುವಿನ ಕುಟುಂಬಕ್ಕೆ ದಂಡ ವಿಧಿಸಿದ್ದರು. ಈ ವಿಷಯ ಪತ್ರಿಕೆಗಳಲ್ಲಿ ವರದಿ ಆಗುತ್ತಿದ್ದಂತೆ ಪ್ರಕರಣ ದಾಖಲಾಗಿತ್ತು. ದಲಿತ ಕುಟುಂಬಕ್ಕೆ ಗ್ರಾಮದ ಮೇಲ್ಜಾತಿಯವರು 25 ಸಾವಿರ ರೂಪಾಯಿ ದಂಡ ಹಾಕಿದ್ದರು. ಅಂದು ದೇವಾಲಯ ಪ್ರವೇಶಿಸಿದ ಮಗುವಿನ ಹೆಸರು ವಿನಯ್. ಹಾಗಾಗಿ ರಾಜ್ಯ ಸರ್ಕಾರ ಅಸ್ಪೃಶ್ಯತೆ ತೊಡೆದು ಹಾಕಲು ಉದ್ದೇಶಿಸಿರುವ ಜಾಗೃತಿಗೆ ಆ ಮಗುವಿನ ಹೆಸರನ್ನು ಇರಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada