ವಿದೇಶಗಳಲ್ಲಿ ಡೇಟಿಂಗ್ ಆ್ಯಪ್ ಬಳಸಿದಷ್ಟು ಭಾರತೀಯರು ಬಳಸುವುದಿಲ್ಲ. ಆದರೆ ಫಾರಿನ್ನಲ್ಲಿ ಇದು ತುಂಬಾ ಕಾಮನ್. ಬೇಕೆಂದಾಗ ಡೇಟಿಂಗ್ ಆ್ಯಪ್ ಬಳಸೋದು ಬಿಡೋದು ಅವರವರ ಇಷ್ಟ. ಬಹಳಷ್ಟು ಜನರು ಒಂಟಿತನ ಕಳೆಯಲು, ಸುಂದರವಾಗಿ ದಿನ ಕಳೆಯಲು, ಸಂಗಾತಿಗಾಗಿ ಡೇಟ್ ಮಾಡುತ್ತಾರೆ. ಆದರೆ ಈಕೆಯಂತಹ ಉದ್ದೇಶ ಬಹುಶಃ ಬೇರೆ ಯಾರಿಗೂ ಇರದು. ಡೇಟಿಂಗ್ ಆ್ಯಪ್ ಡೌನ್ಲೋಡ್ ಮಾಡುವಾಗ ಈಕೆಗೆ ಸ್ಪಷ್ಟ ಉದ್ದೇಶವಿತ್ತು. ಆಕೆಯ ಉದ್ದೇಶ ಸಾಧಿಸಿದ್ದಾಳೆ ಕೂಡಾ. ಒಂದು ರೀತಿಯಲ್ಲಿ ಈಕೆ ಮಾಡಿದ್ದು ತಪ್ಪು ಎನ್ನುವಂತಿದ್ದರೂ ಬಹಳಷ್ಟು ಜನರು ಈಕೆಯನ್ನು ಸ್ಮಾರ್ಟ್ ಹುಡುಗಿ ಎಂದು ಹೊಗಳಿದ್ದಾರೆ. ಅಷ್ಟಕ್ಕೂ ಈಕೆ ಮಾಡಿದ್ದೇನು ಗೊತ್ತಾ?
ಲಕ್ಷುರಿ ಹೊಟೇಲ್ ರೆಸ್ಟೋರೆಂಟ್ಗಳಲ್ಲಿ ತಿನ್ನೋಕೆ ಈಕೆ ಡೇಟಿಂಗ್ ಮಾಡೋ ಐಡಿಯಾ ಮಾಡಿದ್ದಾಳೆ. ಈ ಮೂಲಕ ಡೇಟ್ಗೆ ಬಂದ ಹುಡುಗರ ದುಡ್ಡಲ್ಲಿ ಬೇಕಾಬಿಟ್ಟಿ ತಿಂದಿದ್ದಾಳೆ.
16 ದಿನ 16 ಜನರೊಂದಿಗೆ ಟೇಟ್
ಮೆಕಾಲ್ ಬ್ರಾಕ್ ಎಂಬಾಕೆಗೆ ಮೂರು ಹೊತ್ತು ತಿನ್ನಲು ಆಹಾರ ಖರೀದಿಸಲು ದುಡ್ಡಿರಲ್ಲಿಲ್ಲ. ಹೀಗಾಗಿ ಆಕೆ ಈ ಉಪಾಯವನ್ನು ಅನುಸಿರಿದ್ದಾಗಿ ಹೇಳಿಕೊಂಡಿದ್ದಾಳೆ. ಕಾಲೇಜಿನಲ್ಲಿ ಊಟಕ್ಕೆ ಹಣವಿಲ್ಲದೇ ಹೋದಾಗ ನಾನು ಡೇಟಿಂಗ್ ಆಪ್ಗೆ ಹೋಗಿದ್ದೆ ಮತ್ತು 16 ದಿನಗಳ ಕಾಲ ನಾನು ಸತತವಾಗಿ 16 ಡಿನ್ನರ್ ಡೇಟ್ (Dinner Date)ಗಳನ್ನು ಹೊಂದಿದ್ದೆ ಎಂದು ಅವರು ಟಿಕ್ಟಾಕ್ ವೀಡಿಯೊದಲ್ಲಿ ಹೇಳಿದ್ದಾರೆ.
ಎಂಥಾ ಐಡಿಯಾ ಗುರು..!
ಅನೇಕರು ಅವಳನ್ನು ಜೀನಿಯಸ್ ಎಂದು ಕರೆದರೆ, ಇತರರು ಫ್ರೀಯಾಗಿ ಊಟ ಮಾಡಬಹುದು ಎಂಬ ಕಾರಣಕ್ಕೆ ಡೇಟಿಂಗ್ ಮಾಡಲು ಪುರುಷರನ್ನು ಬಳಸಿಕೊಂಡಿದ್ದಾಗಿ ಆಕೆಯನ್ನು ದೂರಿದ್ದಾರೆ.
ಈ ರೀತಿ ಸಂಬಂಧ ಮಿಸ್ಯೂಸ್ ಮಾಡಬಾರದು ಅಂತಿದ್ದಾರೆ ಜನ
ಒಬ್ಬ ಬಳಕೆದಾರರು, ಸಂಬಂಧವನ್ನು ವ್ಯವಹಾರ ಮಾಡುವುದು ಸರಿಯಲ್ಲೆ ಎಂದಿದ್ದಾರೆ. ಇನ್ನು ಕೆಲವರು ಡೇಟಿಂಗ್ ಮೂಲಕ ಬಿಟ್ಟಿ ತಿನ್ನುತ್ತಿದ್ದ ಮಹಿಳೆಯ ನಡೆಗೆ ಎ ಯೂನಿವರ್ಸಲ್ ಲೈಫ್ ಹ್ಯಾಕ್ ಎಂದು ಬರೆದಿದ್ದಾರೆ. ಮೂರನೆಯ ಬಳಕೆದಾರರು ಇದೊಂದು ಅದ್ಭುತ ಪ್ರತಿಭೆ ಎಂದು ಹೇಳಿದ್ದಾರೆ. ಕೆಲವೊಬ್ಬರು ಮಹಿಳೆ ಡೇಟಿಂಗ್ಗೆ ಅಹಾರ ತಿನ್ನಲು ಹೋಗುತ್ತಿದ್ದುದ್ದು ತುಂಬಾ ಚೀಪ್ ಆದ ವರ್ತನೆ ಎಂದು ಟೀಕಿಸಿದ್ದಾರೆ.
ಆದರೂ ಬಿಡಿ, ಹೀಗೊಂದು ಕ್ರಿಯೇಟಿವ್ ಐಡಿಯಾ ಅಷ್ಟು ಬೇಗ ಸಿಗಲ್ಲ. ಈಕೆ ಜೀನಿಯಸ್ ಎನ್ನುವುದರಲ್ಲಿ ತಪ್ಪೇ ಇಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada