ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ , ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಇಂದು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಕ್ರಮವಾಗಿ ಪ್ರತಿ ಲೀಟರ್ಗೆ 80 ಮತ್ತು 70 ಪೈಸೆ ಹೆಚ್ಚಾಗಿದೆ.
ಈ ಮೂಲಕ ಪೆಟ್ರೋಲ್ ಬೆಲೆ ಲೀಟರ್ ಗೆ 100.21 ರೂ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 91.47 ರೂ . ಇದೆ. ಮುಂಬೈನಲ್ಲಿ, ಪೆಟ್ರೋಲ್ 85 ಪೈಸೆ ಹೆಚ್ಚಳವಾಗಿದ್ದು, 115.04 ರೂ.ಗೆ ಏರಿಕೆಯಾಗಿದೆ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 75 ಪೈಸೆ ಹೆಚ್ಚಳವಾಗಿದ್ದು, ಈ ಮೂಲಕ 99.25 ರೂ.ಇದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 76 ಪೈಸೆ ಹೆಚ್ಚಳವಾಗಿದ್ದು, ಈ ಮೂಲಕ ಪೆಟ್ರೋಲ್ ಬೆಲೆ 105.94 ರೂ.ಗೆ ಮಾರಾಟವಾಗಿದೆ. ಡೀಸೆಲ್ ಬೆಲೆ 67 ಪೈಸೆ ಹೆಚ್ಚಳವಾಗಿದ್ದು, ಲೀ.ಡೀಸೆಲ್ 96 ರೂ.ಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ 83. 70 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ಬೆಲೆ ಲೀ. 109.68 ರೂ. ಡೀಸೆಲ್ ಬೆಲೆ 94.62 ರೂ.ಗೆ ಹೆಚ್ಚಳವಾಗಿದೆ.