ನೀರು ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತಾ?

 

ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ದೇಹದ ಪ್ರತಿ ಭಾಗಕ್ಕೂ ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಸಾಗಿಸುವುದು ನೀರಿನ ಕೆಲಸ. ದೇಹದ ಉಷ್ಣತೆಯನ್ನು ನಿಯಂತ್ರಿಸುವ ನೀರು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮೂತ್ರ, ಬೆವರು ಅಥವಾ ಮಲ ರೂಪದಲ್ಲಿ ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ನೆರವಾಗುತ್ತದೆ.

 

ಚೆನ್ನಾಗಿ ನೀರು ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ನಿಮ್ಮ ದೇಹದ ಶಕ್ತಿ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಜೀವಜಲ ಬೇಕೇ ಬೇಕು. ಸಾಕಷ್ಟು ನೀರು ಕುಡಿಯುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಒತ್ತಡ ಮತ್ತು ಸೋಂಕುಗಳಿಂದ ಪಾರಾಗಬಹುದು. ಪ್ರತಿದಿನ ಸಾಕಷ್ಟು ನೀರು ಕುಡಿಯದೇ ಇದ್ದರೆ ನೀವು ಡಿಹೈಡ್ರೇಶನ್‌ ನಿಂದ ಬಳಲಬಹುದು.

ನೀವು ಡಿ ಹೈಡ್ರೇಟ್‌ ಆಗಿದ್ದೀರಾ? ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರು ಪೂರೈಕೆಯಾಗುತ್ತಿಲ್ವಾ ಎಂಬುದನ್ನು ಸಹ ತಿಳಿದುಕೊಳ್ಳಬೇಕು. ಡಿಹೈಡ್ರೇಶನ್‌ ಆಗಿದ್ದರೆ ಅದನ್ನು ಸರಿದೂಗಿಸಲು ಚೆನ್ನಾಗಿ ನೀರು ಕುಡಿಯುವುದರ ಜೊತೆಗೆ ಸೌತೆಕಾಯಿ, ಕಲ್ಲಂಗಡಿ, ಲೆಟಸ್, ಸೆಲರಿ, ದ್ರಾಕ್ಷಿ, ಕಿತ್ತಳೆ, ಬೆಲ್ ಪೆಪರ್, ಕೋಸುಗಡ್ಡೆ ಮತ್ತು ಟೊಮೆಟೊಗಳಂತಹ ಹೆಚ್ಚಿನ ನೀರಿನಂಶವಿರುವ ಆಹಾರಗಳನ್ನು ತಿನ್ನಬೇಕು.

 

ನಾರಿನಂಶ ಅಧಿಕವಿರುವ ಆಹಾರಗಳು ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಅಲ್ಲದೆ ದೇಹದ ಉಷ್ಣತೆಯನ್ನು ಕಾಪಾಡುವಲ್ಲಿಯೂ ಇಂಥ ಆಹಾರಗಳು ಸಹಕಾರಿ,

ಬಿಸಲು ಮತ್ತು ಸೆಖೆ ಜಾಸ್ತಿ ಇರುವಾಗ ಬೆವರುವುದು ಸಹಜ. ಈ ಕಾರ್ಯವಿಧಾನದ ಮೂಲಕ ದೇಹವು ತನ್ನ ತಾಪಮಾನವನ್ನು ನಿಯಂತ್ರಿಸುತ್ತದೆ. ನಿಮಗೇನಾದ್ರೂ ಡಿಹೈಡ್ರೇಶನ್‌ ಆಗಿದ್ದರೆ ದೇಹ ಬೆವರುವುದಿಲ್ಲ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದರೆ ಹೃದಯ ಬಡಿತ ಜಾಸ್ತಿಯಾಗುತ್ತದೆ.

 

ಗ್ರೀನ್ ಟೀಯಲ್ಲಿ ಆಯಂಟಿಆಕ್ಸಿಡೆಂಟ್‌ ಇರುವುದರಿಂದ ಇದು ನರಗಳನ್ನು ಕೂಲ್ ಆಗಿ ಇಡುವುದು, ಇದರಿಂದ ಮೈ ತುಂಬಾ ಬೆವರುವುದು ಕಡಿಮೆಯಾಗುವುದು.

 

ನಿಮ್ಮ ದೇಹಕ್ಕೆ ನೀರಿನ ಅಗತ್ಯ ಎಷ್ಟಿದೆ ಅನ್ನೋದನ್ನು ನಿಮ್ಮ ಚರ್ಮವೇ ಸೂಚಿಸುತ್ತದೆ. ಕಡಿಮೆ ನೀರು ಕುಡಿದರೆ ಚರ್ಮವು ಶುಷ್ಕವಾಗಿ ಹೋಗುತ್ತದೆ. ತುರಿಕೆ ಕಾಣಿಸಿಕೊಳ್ಳಬಹುದು, ಚರ್ಮದ ಮೇಲಿಂದ ಸಿಪ್ಪೆಗಳು ಏಳಬಹುದು. ಬೇಸಿಗೆಯಲ್ಲಿ ಮಾತ್ರವಲ್ಲ, ಎಲ್ಲಾ ಕಾಲದಲ್ಲೂ ನಿಯಮಿತವಾಗಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ಆಸ್ಕರ್ ಪ್ರಶಸ್ತಿಯಲ್ಲಿ ಕಪಾಳಮೋಕ್ಷ…..

Mon Mar 28 , 2022
ವಿಲ್ ಸ್ಮಿತ್ ಆಸ್ಕರ್‌ನಲ್ಲಿ ವೇದಿಕೆಯ ಮೇಲೆ ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಮಾಡಿದ ನಂತರ ಸೆಲೆಬ್ರಿಟಿಗಳು ಆಘಾತ ಮತ್ತು ಕೋಪದ ಮಿಶ್ರಣದಿಂದ ಪ್ರತಿಕ್ರಿಯಿಸಿದ್ದಾರೆ. 2022 ರ ಆಸ್ಕರ್ ಸಮಾರಂಭದಲ್ಲಿ ವಿಲ್ ಸ್ಮಿತ್ ಅವರಿಗೆ ಕಪಾಳಮೋಕ್ಷ ಮಾಡಿದ ನಂತರ ಕ್ರಿಸ್ ರಾಕ್ ವಿರುದ್ಧ ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ಲಾಸ್ ಏಂಜಲೀಸ್ ಪೊಲೀಸ್ ಇಲಾಖೆ (LAPD) ಹೇಳಿದೆ. “ಒಳಗೊಂಡಿರುವ ಪಕ್ಷವು ನಂತರದ ದಿನಾಂಕದಲ್ಲಿ ಪೊಲೀಸ್ ವರದಿಯನ್ನು ಬಯಸಿದರೆ, ತನಿಖಾ ವರದಿಯನ್ನು ಪೂರ್ಣಗೊಳಿಸಲು ಲಭ್ಯವಿರುತ್ತದೆ” […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: